ಬೆಂಗಳೂರು : ರಾಜ್ಯದಲ್ಲಿ ವಿಧಾನಸಭಾ ಚುನಾವಣಾ ಫಲಿತಾಂಶಕ್ಕೆ ದಿನಗಣನೆ ಶುರುವಾಗಿದೆ. ಈ ನಡುವೆ ಸಚಿವ ಆರ್. ಅಶೋಕ್ ಫಲಿತಾಂಶಕ್ಕೂ ಮುನ್ನವೇ ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.
ಬೆಂಗಳೂರಿನಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು, ಕನಕಪುರದಲ್ಲಿ ಗೆಲ್ಲುವ ಎಲ್ಲಾ ಪ್ರಯತ್ನವನ್ನು ನಾನು ಮಾಡಿದ್ದೇನೆ. ಆದರೆ ಜನರ ತೀರ್ಮಾನ ಅಂತಿಮ ಎಂದು ಹೇಳಿದರು.
ಸಿಎಂ ಸ್ಥಾನದ ವಿಚಾರವಾಗಿ ಮಾತನಾಡಿದ ಅವರು, ಸಮೀಕ್ಷೆ ಏನಾದರೂ ಇರಲಿ, ಕಾಂಗ್ರೆಸ್ ನಾಯಕರು ಏನು ಬೇಕಿದ್ದರೂ ಮಾಡಲಿ. ಅಂತಿಮವಾಗಿ ಸರ್ಕಾರ ರಚನೆ ಮಾಡುವುದು ಬಿಜೆಪಿ. ಸಿಎಂ ಆಗುವ ಅವಕಾಶ ನನಗೂ ಬರಬಹುದು. ಎಲ್ಲರಿಗೂ ಒಂದೊಂದು ಅವಕಾಶ ಸಿಗಲಿದೆ ಎಂದು ಹೇಳಿದರು.












