ಚಿಕ್ಕಮಗಳೂರು : ನಾನು ಕಾಂಗ್ರೆಸ್ ಶಾಸಕ, ಸಂಘದ ಸ್ವಯಂ ಸೇವಕ ಎಂದು ಹೇಳಿಕೊಳ್ಳಲು ಹೆಮ್ಮೆ ಅನಿಸುತ್ತದೆ ಎಂದು ಶಾಸಕ ಹೆಚ್.ಡಿ.ತಮ್ಮಣ್ಣ ಹೇಳಿದ್ದಾರೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘ ನನಗೆ ಶಿಸ್ತು ಕಲಿಸಿದೆ. ನಾನು ಕಾಂಗ್ರೆಸ್ ಪಕ್ಷದಿಂದ ಶಾಸಕನಾಗಿದ್ದರು ಸಂಘದ ಸ್ವಯಂ ಸೇವಕ ಎಂದು ಬಿಜೆಪಿಯಿಂದ ಕಾಂಗ್ರೆಸ್ ಸೇರಿ ಗೆದ್ದ ಶಾಸಕ ಹೆಚ್.ಡಿ ತಮ್ಮಯ್ಯ ಹೇಳಿಕೆ ನೀಡಿದ್ದಾರೆ.
ನಾನು ಸಂಘದ ಸ್ವಯಂ ಸೇವಕ, ನಾನು ಜಾತ್ಯಾತೀತ ವ್ಯಕ್ತಿ. ಶಾಂತಿ ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿಯೇ ನನ್ನ ಕೆಲಸ ಮಾಡುತ್ತೇನೆ. ಹಿಂದೆ ಕಾರ್ಯಕ್ರಮಗಳಿಗಾಗಿ ದಾನಿಗಳ ಬಳಿ ಹೋದಾಗ 500 ರೂ ದೊಡ್ಡ ಹಣ. ಅದು ವಸೂಲಿ ಅಲ್ಲ, ಸಂಗ್ರಹ ಎಂದು ಹೇಳಿಕೊಟ್ಟಿದ್ದೇ ಸಂಘ. ನಾನು ಜಾತ್ಯಾತೀತ ವ್ಯಕ್ತಿ, ಜಾತ್ಯಾತೀತ ಶಾಸಕ. ಪ್ರಮಾಣ ವಚನ ಸ್ವೀಕರಿಸುವಾಗ ಅದೇ ನಿಟ್ಟಿನಲ್ಲಿ ಸ್ವೀಕರಿಸಿದ್ದೇನೆ ಎಂದು ಸನ್ಮಾನ ಕಾರ್ಯಕ್ರಮದಲ್ಲಿ ಚಿಕ್ಕಮಗಳೂರು ಶಾಸಕ ಹೆಚ್.ಡಿ.ತಮ್ಮಯ್ಯ ಹೇಳಿದ್ದಾರೆ.