ಚಿಕ್ಕಬಳ್ಳಾಪುರದ ನಂದಿಗಿರಿಧಾಮದಲ್ಲಿ (Nandi hills) ನಿನ್ನೆ ಸಿಎಂ ಬದಲಾವಣೆಯ ಬಗ್ಗೆ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ (Cm siddaramaiah) ನಾನೇ ಐದು ವರ್ಷ ಸಿಎಂ ಎಂದು ಹೇಳಿಕೆ ನೀಡಿದ್ದರು.ಆದ್ರೆ ಅವರ ಈ ಹೇಳಿಕೆ ಕುರಿತು ಜೆಡಿಎಸ್ (Jds) ಸಿಎಂ ಸಿದ್ದರಾಮಯ್ಯರನ್ನ ಟೀಕಿಸಿದೆ.

ಈ ರೀತಿ ಐದು ವರ್ಷ ನಾನೇ ಮುಖ್ಯಮಂತ್ರಿ ಎಂದು ಹೇಳಿಕೊಂಡು ತಿರುಗುವ ಕರ್ಮ ಸಿದ್ದರಾಮಯ್ಯ ಅವರಿಗೆ ಬರಬಾರದಿತ್ತು.ನಾನೇ ಸಿಎಂ.. ನಾನೇ ಸಿಎಂ.. ಎಂದು ಮಾಧ್ಯಮಗಳ ಮುಂದೆ ಗಂಟಲು ಹರಿದು ಕೊಳ್ಳುತ್ತಿರುವುದರ ಹಿಂದೆ ಸಿಎಂ ಕುರ್ಚಿ ಅಲುಗಾಡುತ್ತಿರುವುದನ್ನು ಸೂಚಿಸುತ್ತಿದೆ ಎಂದು ಜೆಡಿಎಸ್ ಸಿಎಂ ಕಾಲೆಳೆದಿದೆ.
ಕಾಂಗ್ರೆಸ್ ನಲ್ಲಿ ನಾಯಕತ್ವ ಬದಲಾವಣೆ ಆಗಬೇಕು ಎಂದು ಡಿಸಿಎಂ ಡಿಕೆಶಿ ಬಣದ ಇಕ್ಬಾಲ್ ಹುಸೇನ್, ಹೆಚ್.ಸಿ ಬಾಲಕೃಷ್ಣ, ರಂಗನಾಥ್, ರವಿ ಗಾಣಿಗ ಸೇರಿದಂತೆ ಹಲವರು ಬಹಿರಂಗವಾಗಿ ಹೇಳಿಕೆ ಕೊಡುತ್ತಿದ್ದಾರೆ.ಇನ್ನು ತಮ್ಮ ನಾಯಕನ ಕುರ್ಚಿಗೆ ಕುತ್ತು ಬಂದಿರುವುದು ಸ್ಪಷ್ಟವಾಗುತ್ತಲೇ ಸಿದ್ದರಾಮಯ್ಯ ಆಪ್ತರು ಸಹ ಕೂಗುಮಾರಿಗಳಂತೆ ಅವರ ಪರ ಬ್ಯಾಟ್ ಬೀಸುತ್ತಿದ್ದಾರೆ ಎಂದು ಜೆಡಿಎಸ್ ಟ್ವೀಟ್ ಮಾಡಿದೆ.

“ಲಾಟರಿ ಸಿಎಂ” ಸಿದ್ದರಾಮಯ್ಯ ಅವರೇ,ನಿಮ್ಮ ಕಾಂಗ್ರೆಸ್ ಸರ್ಕಾರದ ದುರಾಡಳಿತದ ವಿರುದ್ಧ ಮತ್ತು ನಿಮ್ಮ ನಾಯಕತ್ವದ ಬಗ್ಗೆ ಸಚಿವರು ಹಾಗೂ ಕಾಂಗ್ರೆಸ್ ಶಾಸಕರಲ್ಲೇ ಅಸಮಾಧಾನದ ಬೆಂಕಿ ಎದ್ದು, ಹಾದಿ ಬೀದಿಯಲ್ಲಿ ಹೊಗೆಯಾಡುತ್ತಿದೆ. ವಿಪಕ್ಷಗಳ ವಿರುದ್ಧ ಬೆಂಕಿಯುಗುಳಿದರೇ, ನಿಮ್ಮ ಹೊಟ್ಟೆ ಕಿಚ್ಚು ಮತ್ತಷ್ಟು ಉಲ್ಬಣಿಸುತ್ತದೆ ಹೊರತು ಉಪಶಮನವಾಗುವುದಿಲ್ಲ ಎಂದು ಜೆಡಿಎಸ್ ಟ್ವೀಟ್ ಮಾಡಿದೆ.