ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ಮಗ ಹಾಗೂ ಸಚಿವ ಉದನಿಧಿ ಸ್ಟಾಲಿನ್ ನೀಡಿರುವ ಹೇಳಿಕೆ ದೇಶಾದ್ಯಂತ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ ಈ ಹೇಳಿಕೆಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹಾಗೂ ಮುಖ್ಯ ವಾಹಿನಿಯ ಮಾಧ್ಯಮಗಳಲ್ಲಿ ಪರ ವಿರೋಧದ ಚರ್ಚೆಗಳು ಆರಂಭವಾಗಲು ಪ್ರಾರಂಭವಾಗಿದೆ.

ಇನ್ನು ಇದೇ ಹೇಳಿಕೆಯ ಕುರಿತು ಮಾತನಾಡಿರುವ ಸಚಿವ ಚೆಲುವರಾಯಸ್ವಾಮಿ ತಮ್ಮ ಅಭಿಪ್ರಾಯವನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ
ಈ ಕುರಿತು ಉದಯನಿಧಿ ಸ್ಟಾಲಿನ್ ಹೇಳಿಕೆ ಸಾಕಷ್ಟು ಚರ್ಚೆ ನಡೆಯುತ್ತಿದೆ, ಯಾವುದೇ ಧರ್ಮ ಧರ್ಮಕ್ಕೆ ಕೆಟ್ಟ ಪ್ರವೃತ್ತಿ ಬೆಳೆಸಿ ಅಂತ ಹೇಳಲ್ಲ, ಧರ್ಮ ಅಂದ್ರೆ ಎಲ್ಲರನ್ನ ಒಟ್ಟಿಗೆ ತೆಗೆದುಕೊಂಡು ಹೋಗುವಂತದು, ಒಬ್ಬೊಬ್ಬರು ಒಂಥರ ಹೇಳ್ತಾರೆ, ಆ ವಿಚಾರಕ್ಕೆ ತಲೆಕೆಡಿಸಿಕೊಳ್ಳೋದು ಬೇಡ ಎಂದು ಹೇಳಿಕೆ ನೀಡಿದ್ದಾರೆ.