ಧರ್ಮಸ್ಥಳದಲ್ಲಿ (Dharmasthala case) ನೂರಾರು ಶವಗಳನ್ನು ಹೂತಿಟ್ಟ ಆರೋಪ ಮಾಡಿದ್ದ ಮಾಸ್ಕ್ ಮ್ಯಾನ್ (Mask man) ಬಂಧನದ ವಿಚಾರಕ್ಕೆ ಸಂಬಂಧಪಟ್ಟಂತೆ ಡಿಸಿಎಂ ಡಿಕೆ ಶಿವಕುಮಾರ್ (Dk Shivakumar) ಪ್ರತಿಕ್ರಿಯಿಸಿದ್ದಾರೆ.ನೋಡಿ, ಈ ಬಗ್ಗೆ ಬಿಜೆಪಿಯವರು ಏನು ಮಾತಾಡಿರಲಿಲ್ಲ, ಅವರು ಅಡ್ಡ ಗೋಡೆ ಮೇಲೆ ದೀಪ ಇಟ್ಟಂತೆ ಮಾತಾಡಿದರು.

ನಾನು ಪ್ರಸ್ತಾವನೆ ಮಾಡಿದ್ಮೇಲೆ ಅವರು ಮಾತನಾಡುತ್ತಿದ್ದಾರೆ ಎಂದಿದ್ದಾರೆ. ಈ ಬಾಗೆ ನನಗೆ ಮೊದಲಿನಿಂದ ನಂಬಿಕೆ ಇತ್ತು.ತನಿಖೆಗೆ ಧರ್ಮಾಧಿಕಾರಿಗಳು ಕೂಡ ಸ್ವಾಗತ ಮಾಡಿದ್ದರು. ಸಿಎಂ ಭೇಟಿ ಮಾಡಿ, ಒಳ್ಳೇ ಕೆಲಸ ಮಾಡುತ್ತಿದ್ದೀರಿ ಎಂದು ಹೇಳಿದ್ದರು. ಆ ಬಳಿಕ ಬಾಲಕೃಷ್ಣ ಅವರು ಅಸೆಂಬ್ಲಿಯಲ್ಲಿ ಪ್ರಸ್ತಾವನೆ ಮಾಡಿದರು. ನಾನು ಅವತ್ತು ಮಾತಾಡಿರಲಿಲ್ಲ, ಯಾರು ತಪ್ಪು ಮಾಡಿದರು ಅವ್ರ ಮೇಲೆ ಕ್ರಮ ಅಂತ ಅಷ್ಟೇ ಹೇಳಿದ್ದೆ ಎಂದಿದ್ದಾರೆ .

ಈ ಬಗ್ಗೆ ಸಿಎಂ , ಹೋಮ್ ಮಿನಿಸ್ಟರ್ ಕೂಡ ಹೇಳಿದ್ದಾರೆ.ನಾನು ಯಾರ ಪರವೂ ಇಲ್ಲ, ನಾನು ನ್ಯಾಯ ಹಾಗೂ ಧರ್ಮದ ಪರ. ಧರ್ಮದಲ್ಲಿ ರಾಜಕಾರಣ ಮಾಡಬಾರದು ಅಷ್ಟೇ. ತನಿಖೆ ಆಗ್ತಿದೆ , ನೋಡೋಣ ಎಂದಿದ್ದೇ. ಈ ಕೇಸ್ ಬಗ್ಗೆ ಹೋಮ್ ಮಿನಿಸ್ಟರ್ ನೋಡಿಕೊಳ್ಳುತ್ತಾರೆ ಎಂದಿದ್ದಾರೆ.











