ಇತ್ತೀಚೆಗಿನ ದಿನಗಳಲ್ಲಿ ಯಾರು ರಾಜಕೀಯಕ್ಕೆ ಬರಲಿದ್ದಾರೆ, ಯಾರು ರಾಜಕೀಯದಿಂದ ದೂರ ಉಳಿಯಲಿದ್ದಾರೆ ಎಂಬುವುದನ್ನ ಊಹಿಸಲು ಅಸಾಧ್ಯವಾಗಿದೆ. ಇನ್ನು ಇದೇ ವಿಚಾರಕ್ಕೆ ಸಂಬಂಧ ಪಟ್ಟಂತೆ ಕಳೆದ ಕೆಲ ದಿನಗಳಿಂದ ರಾಜ ವಂಶಸ್ಥ ಯದುವೀರ್ ಒಡೆಯರ್ ರಾಜಕೀಯಕ್ಕೆ ಬರಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು, ಇದೀಗ ಇದೇ ವಿಚಾರಕ್ಕೆ ಸಂಬಂಧ ಪಟ್ಟಂತೆ ಸ್ವತಃ ಯದುವೀರ್ ಒಡೆಯರ್ ಈ ಕುರಿತು ಸ್ಪಷ್ಟನೆಯನ್ನ ನೀಡಿದ್ದಾರೆ. ಈ ಕುರಿತು ಮಾತನಾಡಿರುವ ಅವರು
ʼʼನನಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ, ರಾಜಕೀಯದಲ್ಲಿ ನಮ್ಮ ಪಾತ್ರ ಏನು ಇಲ್ಲ, ನಾವು ಸಮಾಜದ ಕಾರ್ಯಕ್ರಮದಲ್ಲಿ ಸದಾ ಭಾಗವಹಿಸುತ್ತೇವೆ, ಅದರ ಜೊತೆಗೆ ಸಮಾಜದ ಹಿತರಕ್ಷಣೆಗಾಗಿ ರಾಜಕೀಯ ಮೂಲಕ ಮಾಡುವ ಅವಶ್ಯಕತೆ ಇಲ್ಲ, ಬೇರೆ ರೀತಿಯಲ್ಲೂ ಮಾಡಬಹುದು ಅದನ್ನ ಮಾಡಲು ನಾವು ಪ್ರಯತ್ನ ಮಾಡ್ತೇನೆ, ರಾಜಕೀಯದಲ್ಲಿ ನನಗೆ ಆಸಕ್ತಿ ಇಲ್ಲ ಸ್ಪರ್ಧೆ ಮಾಡಲ್ಲ. ಎಂದು ಸ್ಪಷ್ಟ ಪಡಿಸಿದ್ದಾರೆ.

ಸದ್ಯದ ಮಟ್ಟಿಗೆ ಯದುವೀರ್ ಒಡೆಯರ್ ಅವರ ಈ ಹೇಳಿಕೆ ಈಗ ಮೈಸೂರಿನ ರಾಜಕಾರಣದಲ್ಲಿ ಹೆಚ್ಚು ಅಚ್ಚರಿಯನ್ನ ಉಂಟು ಮಾಡದೇ ಇದ್ದರು, ಇಷ್ಟು ದಿನಗಳು ಹಬ್ಬಿದ ಗುಮಾನಿಗಳಿಗೆ ಈಗ ಮುಕ್ತಿ ಸಿಕ್ಕಿದೆ ಎಂದರೆ ತಪ್ಪಾಗೋದಿಲ್ಲ.