ರಾಜರಾಜೇಶ್ರವರಿ ನಗರ ಶಾಸಕ ಮುನಿರತ್ನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಿ ಇಡೀ ಪ್ರಕರಣದ ಬಗ್ಗೆ ಹೇಳಿಕೊಂಡಿದ್ದಾರೆ. ಡಿ.ಕೆ ಶಿವಕುಮಾರ್ ಸಹೋದರನ ಸೋಲಿನ ಒಂದೇ ಕಾರಣಕ್ಕೆ ನನ್ನನ್ನು ಟಾರ್ಗೆಟ್ ಮಾಡ್ತಿದ್ದಾರೆ. ಪಕ್ಷದಲ್ಲೇ ನನ್ನ ಹಾಗೂ ಕೆಲ ಜಾತಿಗಳ ಎತ್ತಿಕಟ್ಟುವ ಕೆಲಸ ಆಗಿದೆ. ನಾನು ಯಾವುದೇ ತಪ್ಪು ಮಾಡಿಲ್ಲ, ಕಾಂಗ್ರೆಸ್ ನನ್ನನ್ನು ಮರ್ಡರ್ ಮಾಡಲು ಹೊರಟಿದೆ ಎಂದಿದ್ದಾರೆ. ತಾವು ಮಧ್ಯ ಪ್ರವೇಶ ಮಾಡಿ, ಪಕ್ಷದ ನಾಯಕರು ನನ್ನ ಪರವಾಗಿ ನಿಲ್ಲುವಂತೆ ಮಾಡಿ ಎಂದು ಕೇಳಿಕೊಂಡಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾಗೆ ಮನವಿ ಮಾಡಿರು ಶಾಸಕ ಮುನಿರತ್ನ, ಡಿಸಿಎಂ ಡಿಕೆ ಶಿವಕುಮಾರ್, ಮಾಜಿ ಸಂಸದ ಡಿಕೆ ಸುರೇಶ್ ಹೆಸರನ್ನು ಪ್ರಸ್ತಾಪಿಸಿ ದೂರು ನೀಡಿದ್ದಾರೆ. ತಮ್ಮ ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲೂ ತಾನು ಶಾಸಕ ಆಗಿದ್ದರೂ ಕೂಡ ಕುಸುಮಾ ಹನುಮಂತರಾಯಪ್ಪ ಅಣತಿಯಂತೆ ಕೆಲಸ ಕಾರ್ಯ ನಡೀತ್ತಿದೆ. ತಮಗೆ ಕಾಂಗ್ರೆಸ್ ನಾಯಕರಿಂದ ಕಿರುಕುಳ ಆಗ್ತಿದೆ. ಮೊಟ್ಟೆ ದಾಳಿ ಮಾಡಿ ನನ್ನನ್ನು ಮುಗಿಸುವ ಪ್ರಯತ್ನ ಮಾಡಿದ್ರು. ಇದೆಲ್ಲವೂ ಡಿ.ಕೆ ಶಿವಕುಮಾರ್ ಅವರ ಸಹೋದರನ ಸೋಲಿನಿಂದಲೇ ಸೃಷ್ಟಿಯಾಯ್ತು ಎಂದು ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದ್ದಾರೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧೆ ಮಾಡಿ ಡಿ.ಕೆ ಸುರೇಶ್ ವಿರುದ್ಧ ನನ್ನ RR ನಗರ ಕ್ಷೇತ್ರದಲ್ಲಿ ಬಿಜೆಪಿಯ ಡಾ. ಮಂಜುನಾಥ್‌ಗೆ ಹೆಚ್ಚು ಲೀಡ್ ಬಂದಿತ್ತು. ಇದೊಂದೇ ಕಾರಣಕ್ಕೆ ನನ್ನನ್ನು ಟಾರ್ಗೆಟ್ ಮಾಡ್ತಿದ್ದಾರೆ. ಇದರ ಬಗ್ಗೆ ಕೇಂದ್ರ ಗೃಹ ಸಚಿವರಿಗೂ ಪತ್ರ ಬರೆದಿದ್ದೇನೆ. ಸಾಧ್ಯವಾದರೆ ಒಮ್ಮೆ ಅಮಿತ್ ಶಾ ಭೇಟಿಗೂ ಅವಕಾಶ ಮಾಡಿಕೊಡುವಂತೆ ಮುನಿರತ್ನ ಮನವಿ ಮಾಡಿಕೊಂಡಿದ್ದಾರೆ. ಮುನಿರತ್ನ ಮನವಿ ಆಲಿಸಿದ ಬಳಿಕ ರಾಜ್ಯದ ನಾಯಕರ ಜೊತೆ ಚರ್ಚೆ ಮಾಡೋದಾಗಿ ಭರವಸೆ ನೀಡಿದ್ದಾರೆ ಜೆಪಿ ನಡ್ಡಾ.
ಆರ್ ಅಶೋಕ್‌ಗೂ ಏಡ್ಸ್ ಇಂಜೆಕ್ಷನ್ ಕೊಡಲು ಮುಂದಾಗಿದ್ದರು ಎನ್ನುವ ವಿಚಾರವನ್ನು ಬಹಿರಂಗ ಮಾಡುವ ಮೂಲಕ ಬ ಇಜೆಪಿ ನಾಯಕರೇ ಮುನಿರತ್ನ ವಿರುದ್ಧ ನಿಲ್ಲುವಂತಗೆ ಮಾಡಿದ್ದ ಕಾಂಗ್ರೆಸ್ ಸರ್ಕಾರ, ಏಕಾಂಗಿ ಮಾಡುವಲ್ಲಿ ಸಕ್ಸಸ್ ಆಗಿತ್ತು. ಈಗಾಗಲೇ ಕೋರ್ಟ್ ಯಾವುದೇ ನಿರ್ಧಾರಕ್ಕೆ ಬಂದರೂ ಅದನ್ನು ಅನುಭವಿಸಲು ನಾನು ಸಿದ್ಧ ಎಂದು ಹೇಳಿರುವ ಮುನಿರತ್ನ ಬಿಜೆಪಿ ಪಕ್ಷದ ಒಳಗೆ ಆಗುತ್ತಿರುವ ಮುಜುಗರ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ.