ಆರ್ಎಸ್ಎಸ್(RSS) ವಿರುದ್ಧ ಧ್ವನಿ ಎತ್ತಿದಾಗ ಕರೆಗಳು ಬಂದಿವೆ. ಗಾಂಧೀಜಿ(Gandhiji), ಅಂಬೇಡ್ಕರ್‌ಗೆ(Ambedkar) ಬಿಟ್ಟಿಲ್ಲ, ಇನ್ನು ಇವರು ನಮ್ಮನ್ನು ಬಿಡುತ್ತಾರಾ? ಯಾವುದೇ ಕರೆ ಬಂದರೂ ಹೆದರುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ಬೆದರಿಕೆ ಕರೆ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಿಂದಿ(Hindi), ಇಂಗ್ಲೀಷ್‌ನಲ್ಲಿ(english) ಮಾತಾನಾಡುತ್ತಾರೆ. ನೋ ಕಾಲರ್ ಐಡಿ(No Caller ID), ಅಂತರಾಷ್ಟ್ರೀಯ ನಂಬರ್ ಇದೆ. ಕೆಟ್ಟ ಭಾಷೆಯಿಂದ ನಮಗೆ, ಕುಟುಂಬದವರಿಗೆ, ಕುಟುಂಬದವರ ಪರಿಸ್ಥಿತಿ ಬಗ್ಗೆ ಮಾತಾನಾಡುತ್ತಾರೆ. ಇದು ಸಹಜ, ವಿರೋಧ ಪಕ್ಷದಲ್ಲಿ ಇದ್ದಾಗಲೂ ಎರಡ್ಮೂರು ಬಾರಿ ದೂರು ಕೊಟ್ಟಿದ್ದೆ. ಬೊಮ್ಮಾಯಿ ಇದ್ರು, ತನಿಖೆ ಮಾಡಿಸಿದರು. ಆಗ ಇದು ಹೊರ ದೇಶದಿಂದ ಬರುತ್ತಿವೆ ಅಂದರು. ಈಗಲೂ ಅದೇ ನಡೆದಿದೆ ಎಂದರು.

ಮಲ್ಲಿಕಾರ್ಜುನ ಖರ್ಗೆ ಅವರಿಗೂ ಬೆದರಿಕೆ ಕರೆ ಬಂದಿತ್ತು, ಈಗಲೂ ದೂರು ಇದೆ. ಎಫ್‌ಐಆರ್ ರಿಜಿಸ್ಟರ್ (FIR Register) ಮಾಡಬಹುದು, ಆದರೆ ಕಂಡು ಹಿಡಿಯೋದು ಕಷ್ಟ. ನಾವ್ಯಾಕೆ ಈ ಸಿದ್ಧಾಂತದಿಂದ ಹಿಂದೆ ಸರಿಯಲಿ? ಈ ತತ್ವದಿಂದ ಗಾಂಧೀಜಿ ಬಲಿ ತೆಗೆದುಕೊಂಡಿಲ್ವಾ? ಸಂವಿಧಾನದಲ್ಲಿ ನಮಗೆ ನಂಬಿಕೆ ಇದೆ. ಇದು ನನ್ನ ಸಿದ್ಧಾಂತ, ನಾನು ಮಾತನಾಡಿದ್ದೇನೆ. ಪಕ್ಷದಿಂದ ಸಪೋರ್ಟ್ ಇಲ್ಲ ಅಂತ ಯಾರು ಹೇಳಿದ್ದು? ಸಿಎಂ ಹಾದಿಯಾಗಿ ಎಲ್ಲರೂ ಸಪೋರ್ಟ್ ಮಾಡಿದ್ದಾರೆ ಎಂದು ಸಮರ್ಥಿಸಿಕೊಂಡರು

ಪತ್ರ ಬರೆದು 48 ತಾಸು ಅಷ್ಟೇ ಆಗಿರೋದು. ಇಲ್ಲಿ ಆರ್‌ಎಸ್‌ಎಸ್ (RSS) ಮಾತನಾಡುತ್ತಿಲ್ಲ, ಬಿಜೆಪಿ (BJP) ಮಾತನಾಡುತ್ತಿದೆ. ಸದನದಲ್ಲಿ ಆರ್‌ಎಸ್‌ಎಸ್ (RSS) ಬಗ್ಗೆ ಮಾತಾಡಿದರೆ ಇಡೀ ಸದನ ಮುಗಿಸುತ್ತಾರೆ. ಆರ್‌ಎಸ್‌ಎಸ್ (RSS) ಸೋ ಕಾಲ್ಡ್ ಒಂದು ಸಂಸ್ಥೆ ಅಷ್ಟೇ. ರಿಜಿಸ್ಟಾರ್ ಆಗದಿರೋ ಸಂಸ್ಥೆ ಅಷ್ಟೇ ಇದು. ಎಲ್ಲೇ ಕಾರ್ಯಕ್ರಮ ಮಾಡಿದರೂ ಪರ್ಮಿಷನ್ ತೆಗದುಕೊಳ್ಳಲೇಬೇಕು. ಇವರು ಯಾಕೆ ಪರ್ಮಿಷನ್ ತೆಗೆದುಕೊಂಡಿಲ್ಲ? ಇದು ನನ್ನ ಡಿಮ್ಯಾಂಡ್ ಅಲ್ಲ ಇದು ನನ್ನ ಸಲಹೆ. ನಾನು ಒಂದು ಕರೆ ಕೊಟ್ಟು ಅಂಬೇಡ್ಕರ್ ಕಾರ್ಯಕ್ರಮ ಮಾಡೋಣ ಅಂದರೆ ಬಿಡುತ್ತೀರಾ? ನಮ್ಮ ಸರ್ಕಾರ ಇರೋದಕ್ಕೆ ನಾನು ಸಲಹೆ ನೀಡಿದ್ದು. ಬಳಿಕ ಬೇರೆ ಸರ್ಕಾರಕ್ಕೆ ನಂತರ ಪತ್ರ ಬರೆಯೋಣ ಎಂದು ಹೇಳಿದರು.









