ಇಸ್ರೊ ಸಂಸ್ಥೆ ನಿವೃತ್ತ ನೌಕರ ತನ್ನ ಪತ್ನಿಯನ್ನೆ ಉಸಿರುಗಟ್ಟಿಸಿ ಕೊಮದಿದ್ದಾನೆ. ಕಾರಣ ಬಹಳ ವಿಚಿತ್ರವಾಗಿದೆ. ಈ ಘಟನೆ ಬೆಂಗಳೂರಿನ ಆವಲಹಳ್ಳಿಯ ವಿರ್ಟುಸೊ ಅಪಾರ್ಟ್ಮೆಂಟ್ನಲ್ಲಿ ನಡೆದಿದೆ. ಪತ್ನಿ ಸಧ್ಯಾರ ಉಸಿರುಗಟ್ಟಿಸಿ ಪತಿ ನಾಗಲೇಶ್ವರ ರಾವ್ ಕೊಲೆ ಮಾಡಿದ್ದಾನೆ. ಕಾರಣ ಕೇಳಿದವರು ಆಶ್ಚರ್ಯ ಪಡುತ್ತಿದ್ದಾರೆ.

ನಾಗಲೇಶ್ವರ ರಾವ್, ಇಸ್ರೋ ಸಂಸ್ಥೆಯ ನಿವೃತ್ತ ನೌಕರರು ಹೆಂಡತಿ ಸಧ್ಯಾ ಅವರೊಂದಿಗೆ ವಿರ್ಟುಸೊ ಅಪಾರ್ಟ್ಮೆಂಟ್ನಲ್ಲಿ ಇದ್ದರು. ವಿಚಾರಣೆ ವೇಳೆ ಯಾರೂ ಸಂಬಂಧಿಕರು ಇಲ್ಲ, ನಾನು ಸತ್ತರೆ ಪತ್ನಿಯನ್ನು ಯಾರು ನೋಡಿಕೊಳ್ಳುತ್ತಾರೆ, ಆಕೆಯ ಮುಂದಿನ ಜೀವನ ಹೇಗೆ? ಹಾಗಾಗಿ ಆಕೆಯನ್ನ ಕೊಲೆ ಮಾಡಿದೆ ಎನ್ನುತ್ತಿರುವ ನಾಗಲೇಶ್ವರ ರಾವ್, ಮಾನಸಿಕ ಅಸ್ವಸ್ಥರಂತೆ ವರ್ತಿಸುತ್ತಿದ್ದಾರೆ.

ಇವರ ಓರ್ವ ಮಗಳು ಅಮೆರಿಕದಲ್ಲಿದ್ದಾರೆಂಬ ಮಾಹಿತಿ ಸಿಕ್ಕಿದೆ. ಸದ್ಯ ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಘಟನೆಯ ಹಿಂದಿನ ನಿಖರ ಕಾರಣಗಳ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.






