ಸುಳ್ಯ;ಸುಳ್ಯದ ಲಾಡ್ಜ್ ನಲ್ಲಿ ಮಂಗಳೂರು ಮೂಲದ ವಿವಾಹಿತ ಯುವಕ ಬೇರೆ ಯುವತಿಯೊಂದಿಗೆ ಪತ್ನಿಗೆ ಸಿಕ್ಕಿ ಬಿದ್ದಿದ್ದು ಬಳಿಕ ಬೀದಿ ರಂಪಾಟ ನಡೆದಿದೆ. ಮಂಗಳೂರು ಮೂಲದ ವಿವಾಹಿತ ಯುವಕ ಸುಳ್ಯದ ಗಾಂಧಿನಗರ ಲಾಡ್ಜ್ ನಲ್ಲಿ ಇರುವುದನ್ನು ತಿಳಿದ ಆಕೆಯ ಪತ್ನಿ ಲಾಡ್ಜ್ ಗೆ ನುಗ್ಗಿದ್ದಾಳೆ.
ಈ ವೇಳೆ ಪತಿ ಮತ್ತು ಜೊತೆಯಲ್ಲಿದ್ದ ಯುವತಿಯನ್ನು ಬೀದಿಗೆ ಎಳೆದು ತರಾಟೆಗೆ ತೆಗೆದುಕೊಂಡು ರಂಪಾಟ ಮಾಡಿದ್ದಾರೆ.ಪತಿಯನ್ನು ಮತ್ತು ಆ ಯುವತಿಯನ್ನು ರಸ್ತೆಯಲ್ಲಿ ಎಳೆದಾಡಿ, ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ಬಂದು ಮೂವರನ್ನೂ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.