ಜೆರುಸಲೇಂ: ಗಾಜಾದಲ್ಲಿ ಮಾನವೀಯ ಬಿಕ್ಕಟ್ಟು ಉಲ್ಬಣಗೊಳ್ಳುತ್ತಿದ್ದಂತೆ, ಈಜಿಪ್ಟ್ ಮತ್ತು ಅಮೆರಿಕ ಗಾಜಾದ ಸಹಾಯಕ್ಕೆ ಬಂದಿವೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗಿನ ಭೇಟಿಯ ನಂತರ, ಯುಎಸ್ ಅಧ್ಯಕ್ಷ ಜೊ ಬೈಡನ್ ಅವರು ಗಾಜಾಕ್ಕೆ ಮಾನವೀಯ ನೆರವಿನ 20 ಟ್ರಕ್ಗಳನ್ನು ಕಳುಹಿಸಲು ರಫಾ ಕ್ರಾಸಿಂಗ್ ನ್ನು ತೆರೆಯಲು ಕೈರೋ ಒಪ್ಪಿಕೊಂಡಿದ್ದಾರೆ ಎಂದು ಘೋಷಿಸಿದ್ದಾರೆ.
ನಾಳೆಯ ನಂತರ ಸಹಾಯ ಕಲ್ಪಿಸಲಾಗುವುದು ಎಂದು ಬೈಡನ್ ಸುದ್ದಿಗಾರರಿಗೆ ತಿಳಿಸಿದರು. ಗಾಜಾ ಪಟ್ಟಿಯಲ್ಲಿರುವ ಅಲ್-ಅಹಿಲ್ ಆಸ್ಪತ್ರೆಯ ಮೇಲಿನ ವೈಮಾನಿಕ ದಾಳಿ ಸುಮಾರು 500 ಜನರನ್ನು ಬಲಿ ತೆಗೆದುಕೊಂಡಿತು.

ಇಸ್ರೇಲ್ ಮಂಗಳವಾರ ಬಾಂಬ್ ದಾಳಿಯನ್ನು ಮುಂದುವರೆಸುತ್ತಿದ್ದಂತೆ, ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಖಮೇನಿ ಇಸ್ರೇಲ್ಗೆ ಎಚ್ಚರಿಕೆ ನೀಡಿದರು, ಗಾಜಾದ ಮೇಲೆ ಬಾಂಬ್ ದಾಳಿಯನ್ನು ಮುಂದುವರೆಸಿದರೆ ಇಸ್ರೇಲ್ ವಿರುದ್ಧ ಪ್ರತಿರೋಧ ಪಡೆಗಳನ್ನು “ಯಾರೂ ತಡೆಯಲು ಸಾಧ್ಯವಿಲ್ಲ” ಎಂದು ಎಚ್ಚರಿಕೆ ನೀಡಿದ್ದರು.
ಬೈಡನ್ ಅವರು ಇಸ್ರೇಲ್ಗೆ ಭೇಟಿ ನೀಡುತ್ತಿರುವಂತೆಯೇ, ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್ ಕೂಡ ಇಸ್ರೇಲ್ನಲ್ಲಿ ಒಗ್ಗಟ್ಟು ಪ್ರದರ್ಶಿಸಲು ಅವರೊಂದಿಗೆ ಸೇರುವ ನಿರೀಕ್ಷೆಯಿದೆ. ಪ್ರಸ್ತುತ ಯುದ್ಧವು ಈಗಾಗಲೇ ಎರಡೂ ಕಡೆಯ ಸಾವಿರಾರು ಜೀವಗಳನ್ನು ಬಲಿ ತೆಗೆದುಕೊಂಡಿದೆ. ಸಂಘರ್ಷವು ಮತ್ತಷ್ಟು ಉಲ್ಬಣಗೊಳ್ಳುವ ನಿರೀಕ್ಷೆಯಿದೆ.