ಹುಬ್ಬಳ್ಳಿಯಲ್ಲಿ ಸಿಲಿಂಡರ್ ಬ್ಲಾಸ್ಟ್ (Cylinder blast) ಆದ ಪ್ರಕರಣದಲ್ಲಿ ಈಗಾಗಲೇ ತಂದೆ ಮಗ ಸಾವನಪ್ಪಿದ್ದು ,ಇಂದು ಮತ್ತೊರ್ವ ಅಯ್ಯಪ್ಪ ಮಾಲಾಧಾರಿ ಸಾವನ್ನಪ್ಪಿದ್ದಾರೆ. ಆ ಮೂಲಕ ಸಾವಿನ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ.
ಸಿಲಿಂಡರ್ ಸ್ಫೋಟದಿಂದ ತೀವ್ರವಾಗಿ ಗಾಯಗೊಂಡಿದ್ದ 19 ವರ್ಷದ ಲಿಂಗರಾಜ ಬೀರನೂರ ಎಂಬ ಯುವಕ ಚಿಕಿತ್ಸೆ ಫಲಿಸಲಾರದೇ ಇಂದು ಮೃತಪಟ್ಟಿದ್ದಾನೆ.ಕಳೆದ ಭಾನುವಾರ ಈ ಸಿಲಿಂಡರ್ ಬ್ಲಾಸ್ಟ್ ಸಂಭವಿಸಿತ್ತು.
ಡಿ.22 ರಂದು ಹುಬ್ಬಳ್ಳಿಯ ಸಾಯಿನಗರದಲ್ಲಿ ಈ ದುರ್ಘಟನೆ ಸಂಭವಿಸಿತ್ತು. ಸ್ವಾಮಿ ಅಯ್ಯಪ್ಪ ಸನ್ನಿದಿಯಲ್ಲಿ ಗ್ಯಾಸ್ ಸೋರಿಕೆಯಾಗಿ ಸಿಲಿಂಡರ್ ಬ್ಲಾಸ್ಟ್ ಆಗಿ ಅವಘಡದಲ್ಲಿ 9 ಮಾಲಾಧಾರಿಗಳಿಗೆ ತೀವ್ರ ಗಾಯವಾಗಿತ್ತು . ಉಳಿದ ಗಾಯಾಳುಗಳು ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.