ಹುಬ್ಬಳ್ಳಿಯ (Hubli) ಅಂಜಲಿ ಅಂಬಿಗೇರ (Anjali ambigera) ಹತ್ಯೆ ಪ್ರಕರಣದ ಆರೋಪಿ ಗಿರೀಶ್ ನನ್ನ (Girish) ಸದ್ಯ ಬಂಧಿಸಲಾಗಿದೆ. ಪ್ರಕರಣದ ತನಿಖೆ ನಡೆಸ್ತಿರುವ ಪೊಲೀಸರಿಂದ ಮತ್ತಷ್ಟು ಸಂಗತಿಗಳು ಬಯಲಾಗಿವೆ. ಅಂಜಲಿ ಅಲ್ಲದೇ ಮತ್ತೊಬ್ಬಳು ಯುವತಿಗೆ ಗಿರೀಶ್ ಮೋಸ ಮಾಡಿರುವ ಆರೋಪ ಕೇಳಿಬಂದಿದೆ. ಹಂತಕ ವಿಶ್ವನ ವಿರುದ್ಧ ಸೆಕ್ಷನ್ 420, 504, ಹಾಗೂ 506ರ ಅಡಿಯಲ್ಲಿ ಕೇಸ್ ದಾಖಲಾಗಿದೆ.
ಈ ಹಿಂದೆ ಬೆಂಡಿಗೇರಿ ಠಾಣಾ ವ್ಯಾಪ್ತಿಯ ಯಲ್ಲಾಪುರ ಓಣಿಯ ಯುವತಿಯನ್ನು ಪರಿಚಯ ಮಾಡಿಕೊಂಡಿದ್ದ ಗಿರೀಶ್ ತೊಂದರೆ ಇದೆ, ಹಣ ಕೊಡು ಅಂತ ಪುಸಲಾಯಿಸಿ 8 ಸಾವಿರ ಹಣ ಹಾಗೂ 2 ಮುಕ್ಕಾಲು ತೊಲ ಬಂಗಾರ ಪಡೆದು ವಂಚನೆ ಮಾಡಿದ್ದಾನೆ. ಹಣ, ಚಿನ್ನ ವಾಪಸ್ ಕೇಳಿದ್ರೆ ಕೊಲೆ ಬೆದರಿಕೆ ಹಾಕ್ತಿದ್ದ, ಆತನಿಗೆ ಗಲ್ಲುಶಿಕ್ಷೆ ವಿಧಿಸಬೇಕು ಅಂತ ಯುವತಿಯ ಪೋಷಕರು ಅಳಲು ತೋಡಿಕೊಂಡಿದ್ದಾರೆ. ಈ ನಡುವೆ ಪ್ರಕರಣಕ್ಕೆ ಸಂಬಂಧಿಸಿ ಮತ್ತೊಬ್ಬ ಪೊಲೀಸ್ ಅಧಿಕಾರಿಯ ತಲೆದಂಡವಾಗಿದೆ.
ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ (DCP) ಪಿ. ರಾಜೀವ್ ತಲೆದಂಡವಾಗಿದೆ. ಪಿ ರಾಜೀವ್ ಅಮಾನತ್ತು ಮಾಡಿ ಸರಕಾರ ಆದೇಶ ಹೊರಡಿಸಿದೆ. ಸಾರ್ವಜನಿಕರಿಂದ ಪೋಲೀಸರ ವಿರುದ್ಧ ಅಸಮಾಧಾನ ಹಿನ್ನೆಲೆ ಸರಕಾರದಿಂದ ದಿಟ್ಟ ಕ್ರಮ ಕೈಗೊಳ್ಳಲಾಗಿದೆ. ಎರಡು ದಿನಗಳ ಹಿಂದೆ ಬೆಂಡಿಗೇರಿ ಇನ್ಸ್ಪೆಕ್ಟರ್ ಸಿ.ಬಿ.ಚಿಕ್ಕೋಡಿ ಹಾಗೂ ಬೆಂಡಿಗೇರಿ ಠಾಣೆಯ ಮಹಿಳಾ ಹೆಡ್ ಕಾನ್ಸ್ ಟೇಬಲ್ ರೇಣುಕಾ ಹಾವರಡ್ಡಿ ಕೂಡಾ ಅಮಾನತ್ತಾಗಿದ್ದರು. ಈಗ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಪಿ. ರಾಜೀವ್ ತಲೆದಂಡವಾಗಿದೆ.