ಹುಬ್ಬಳ್ಳಿಯಲ್ಲಿ (Hubli) ಯುವತಿ ಅಂಜಲಿ ಅಂಬಿಗೇರ (Anjaliambigera) ಹತ್ಯೆ ಕೇಸ್ಗೆ ಸಂಬಂಧಿಸಿದಂತೆ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಕರ್ತವ್ಯಲೋಪ ಹಿನ್ನಲೆ ಬೆಂಡಿಗೇರಿ ಇನ್ಸ್ ಪೆಕ್ಟರ್ (Inspector) ಸಿ.ಬಿ ಚಿಕ್ಕೋಡಿ ಹಾಗೂ ಮಹಿಳಾ ಹೆಡ್ ಕಾನ್ಸ್ಟೇಬಲ್ ರೇಖಾ ಹಾವರೆಡ್ಡಿಯನ್ನು ಸಸ್ಪೆಂಡ್ ಮಾಡಲಾಗಿದೆ. ಒಂದು ವಾರದ ಹಿಂದಿಯೇ ಆರೋಪಿ ಗಿರೀಶ್ನಿಂದ ಅಂಜಲಿಗೆ ಜೀವ ಬೆದರಿಕೆ ಇದೆ ಅಂತ ಅಂಜಲಿ ಅಜ್ಜಿ ಗಂಗಮ್ಮ ದೂರು ಕೊಟ್ಟಿದ್ರು.
ಆದ್ರೆ, ದೂರಿಗೆ ಬೆಂಡಿಗೇರಿ ಠಾಣೆ ಪೊಲೀಸರು ಸರಿಯಾಗಿ ಸ್ಪಂದಿಸದೆ ಉಡಾಫೆ ಉತ್ತರ ಹೇಳಿ ಕಳುಹಿಸಿದ್ರಂತೆ. ಇದೀಗ ಗಿರೀಶ್ನಿಂದಲೇ ಅಂಜಲಿ ಹತ್ಯೆಯಾಗಿದ್ದು, ಮೇಲ್ನೋಟಕ್ಕೆ ಪೊಲೀಸರ ನಿರ್ಲಕ್ಷ್ಯ ಸಾಬೀತಾಗಿದೆ. ಇದೇ ಕಾರಣಕ್ಕೆ ಇನ್ಸ್ಪೆಕ್ಟರ್ ಸಿ.ಬಿ ಚಿಕ್ಕೋಡಿ ಹಾಗೂ ಮಹಿಳಾ ಹೆಡ್ ಕಾನ್ಸ್ಟೇಬಲ್ ರೇಖಾ ಹಾವರಡ್ಡಿಯನ್ನು ಅಮಾನತು ಮಾಡಿ ಪೊಲೀಸ್ ಆಯುಕ್ತ ರೇಣುಕಾ ಸುಕುಮಾರ್ (Renuka sukumar) ಆದೇಶ ಹೊರಡಿಸಿದ್ದಾರೆ.
ಇನ್ನು ಗಿರೀಶ್ ಎಂಬಾತ ಅಂಜಲಿ ಮನೆಗೆ ಹೋಗಿ ಬಾಗಿಲು ಬಡಿದು ಒಳಗೆ ಹೋಗಿ ಚಾಕು ಇರಿದಿದ್ದಾನೆ. ಒಟ್ಟು ನಾಲ್ಕು ಬಾರಿ ದೇಹದ ಹಲವು ಕಡೆ ಚಾಕು ಇರಿದಿದ್ದು, ಆರೋಪಿಯ ಪತ್ತೆಗಾಗಿ 2 ತಂಡಗಳನ್ನ ರಚನೆ ಮಾಡಲಾಗಿದೆ ಅಂತ ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ್ ಮಾಹಿತಿ ನೀಡಿದ್ದಾರೆ. ಈ ಮೊದಲು ಪೊಲೀಸ್ ಠಾಣೆಗೆ ಅಂಜಲಿ ಕುಟುಂಬದವರು ಬಂದಿದ್ದರ ಕುರಿತು ತನಿಖೆ ನಡೆಸುತ್ತಿದ್ದೇವೆ. ಈ ಕುರಿತಾಗಿ ಡಿಸಿಪಿ ಕ್ರೈಮ್ ಅವರಿಗೆ ಹೇಳಿದ್ದೇವೆ. ಆರೋಪಿಯ ಬಗ್ಗೆ ಎಲ್ಲಾ ಮಾಹಿತಿ ಕಲೆ ಹಾಕಿದ್ದೇವೆ ಅಂತ ತಿಳಿಸಿದ್ರು.