ಹುಬ್ಬಳ್ಳಿ : ಅಪ್ರಾಪ್ತ ಬಾಲಕಿಯ ಮೇಲೆ ಆಕೆಯ ಸ್ನೇಹಿತರೇ ಸಾಮೂಹಿಕ ಅತ್ಯಾಚಾರ ನಡೆಸಿದ ದಾರುಣ ಘಟನೆಯು ಹುಬ್ಬಳ್ಳಿಯ ಬೈಪಾಸ್ ರಿಂಗ್ ರೋಡ್ ಬ್ರಿಡ್ಜ್ ಬಳಿ ಸಂಭವಿಸಿದೆ. ಮೊಬೈಲ್ ಫೋನ್ ಕೊಡಿಸುವ ನೆಪವೊಡ್ಡಿ ಬಾಲಕಿಯನ್ನು ಹುಬ್ಬಳ್ಳಿಗೆ ಕರೆದುಕೊಂಡು ಬಂದಿದ್ದ ಆರೋಪಿಗಳು ಆಕೆಯ ಮೇಲೆ ಗ್ಯಾಂಗ್ ರೇಪ್ ನಡೆಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಅತ್ಯಾಚಾರಕ್ಕೊಳಗಾದ ಬಾಲಕಿಯ ಸ್ನೇಹಿತ ಸೇರಿದಂತೆ ನಾಲ್ವರು ಯವಕರು ಅಪ್ರಾಪ್ತೆಗೆ ಜೀವ ಬೆದರಿಕೆಯೊಡ್ಡಿ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಈ ಸಂಬಂಧ ದೇವರಾಜ್, ಫಕಿರೇಶ್ ಹಾಗೂ ಇಬ್ಬರು ಅಪರಿಚಿತರ ಮೇಲೆ ಗೋಕುಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪ್ರಾಪ್ತೆಯ ಆರೋಗ್ಯ ಸ್ಥಿತಿ ಬಗ್ಗೆ ಇನ್ನಷ್ಟೇ ಮಾಹಿತಿ ತಿಳಿಯಬೇಕಿದೆ. ಅಲ್ಲದೇ ಈ ಯುವಕರು ಎಲ್ಲಿಯವರು,,? ಎಷ್ಟು ದಿನಗಳಿಂದ ಪ್ಲಾನ್ ಮಾಡಿ ಈ ಕೃತ್ಯ ಎಸಗಿದ್ದಾರೆ..? ಎಂಬುದರ ಬಗ್ಗೆ ಹುಬ್ಬಳ್ಳಿ ಠಾಣಾ ಪೊಲೀಸರು ಒಂದೊಂದೇ ಮಾಹಿತಿ ಕಲೆ ಹಾಕುತ್ತಿದ್ದಾರೆ.