ಬೆಂಗಳೂರಿನಲ್ಲಿ ಕಾರ್ ಒಂದು ನಡುರಸ್ತೆಯಲ್ಲೇ ಹೊತ್ತಿ ಉರಿದ ಘಟನೆ ನಡೆದಿದೆ. ಐಷಾರಾಮಿ ಹ್ಯೂಂಡೈ ವರ್ನಾ ಕಾರು ಈ ರೀತಿ ಇದಕ್ಕಿದ್ದ ಹಾಗೆ ಬೆಂಕಿಗೆ ತುತ್ತಾಗಿದೆ.
ಸದ್ಯಕ್ಕೆ ತಿಳಿದುಬರುತ್ತಿರುವ ಮಾಹಿತಿ ಪ್ರಕಾರ ಕಾರಿನ ಬ್ಯಾಟರಿಯಲ್ಲಿ ಎಲೆಕ್ಟ್ರಿಕ್ ಸ್ಪಾರ್ಕ್ ನಿಂದಾಗಿ ಈ ಅವಘಡ ಸಂಭವಿಸಿದ್ದು, ಕ್ಷಣಮಾತ್ರದಲ್ಲಿ ಬೆಂಕಿ ವ್ಯಾಪಿಸಿ ಕಾರು ಹೊತ್ತಿ ಉರಿದಿದೆ ಎನ್ನಲಾಗಿದೆ.
ವೈಟ್ ಫೀಲ್ಡ್ ಬಳಿಯ ಸಾಯಿ ಲೇಔಟ್ ನಲ್ಲಿ ಈ ಘಟನೆ ನಡೆದಿದ್ದು, ಇಂದು ಸಂಜೆ 8.30 ರ ಸುಮಾರಿಗೆ ನಡೆದಿರುವ ಘಟನೆ ಇದಾಗಿದೆ. ಅಗ್ನಿಶಾಮಕದಳ ಸಿಬ್ಬಂದಿಯಿಂದ ಬೆಂಕಿ ನಂದಿಸುವ ಕಾರ್ಯ ಮಾಡಿದ್ದು,ವೈಟ್ ಫೀಲ್ಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.