ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ಪ್ರಕರಣದಲ್ ತನಿಖೆಯಲ್ಲಿ ಅಪ್ಪ ಮಗ ಲೈಂಗಿಕ ದೌರ್ಜನ್ಯ ಮಾಡಿರುವುದು ಸಾಬೀತಾಗಿದೆ. ಒಂದೇ ಸಂತ್ರಸ್ಥ ಮಹಿಳೆಗೆ ಅಪ್ಪ ಮಗ ಇಬ್ಬರೂ ಲೈಂಗಿಕ ದೌರ್ಜನ್ಯವೆಸಗಿರುವುದು ಇದೇ ವೇಳೆ ಬೆಳಕಿಗೆ ಬಂದಿದೆ.
ಅಪ್ಪ ಲೈಂಗಿಕ ದೌರ್ಜನ್ಯ ಎಸಗಿದ್ರೆ ಮಗ ಅಪ್ಪನ ಮೀರಿಸಿದ ಕೃತ್ಯ ಎಸಗಿದ್ದಾನೆ ಎಂಬುದು ಅತ್ಯಂತ ಶೋಚನೀಯ.ರೇವಣ್ಣ ಹಣ್ಣು ಕೊಡುವ ನೆಪದಲ್ಲಿ ಸಂತ್ರಸ್ಥ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿರುವುದು ಬಯಲಾಗಿದ್ದು, ಹೊಳೆನರಸೀಪುರದ ಮನೆಯಲ್ಲಿ ಈ ಕೃತ್ಯ ಎಸಗಲಾಗಿದೆ. 2020 ರಲ್ಲಿ ಮನೆಯಲ್ಲಿ ಭಾವನಿ ರೇವಣ್ಣ ಇಲ್ಲದ ವೇಳೆ ಈ ಲೈಂಗಿಕ ದೌರ್ಜನ್ಯ ನಡೆದಿದೆ.
ತಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮೂರ್ನಾಲ್ಕು ಜನರನ್ನ ಇದೇ ರೀತಿ ರೇವಣ್ಣ ಬಲವಂತವಾಗಿ ಮಾತನಾಡಿಸುತ್ತಿದರು, ಬಳಿಕ ಕೆಲಸದವರಿಗೆ ಹಣ್ಣು ಕೊಡುವ ನೆಪದಲ್ಲಿ ಸ್ಟೋರ್ ರೂಮ್ ಗೆ ಕರೆಯುತಿದ್ದರು.ಎಲ್ಲಾ ಸ್ಟೋರ್ ರೂಮ್ ನಿಂದ ಹೊರಹೋದ ಬಳಿಕ ಸಂತ್ರಸ್ಥ ಮಹಿಳೆಗೆ ರೇವಣ್ಣ ಹಣ್ಣು ನೀಡುತ್ತಿದ್ದರು.
ಇದೇ ಸಂದರ್ಭ ಬಳಸಿಕೊಂಡು ಹಣ್ಣು ಕೊಡುವಾಗ ಸಂತ್ರಸ್ಥೆಯ ಇಚ್ಚೆಗೆ ವಿರುದ್ದವಾಗಿ ಕೈ ಹಿಡಿದು ಎಳೆದಾಡಿ ಆರೋಪಿ ರೇವಣ್ಣ ದೌರ್ಜನ್ಯವೆಸಗಿದ್ದಾರೆ. ಅಷ್ಟೇ ಅಲ್ಲದೆ ಸಂತ್ರಸ್ಥೆಯ ಮೈ ಕೈ ಮುಟ್ಟಿ, ಹತ್ತಿರಕ್ಕೆ ಎಳೆದುಕೊಂಡು ಲೈಂಗಿಕ ಕಿರುಕುಳ ನೀಡಿದ್ದಾರೆ. ಎಸ್ ಐ ಟಿ ಅಧಿಕಾರಿಗಳ ತನಿಖೆಯಲ್ಲಿ ಸಂತ್ರಸ್ಥೆಗೆ ಹೆಚ್ ಡಿ ರೇವಣ್ಣ ಲೈಂಗಿಕ ಕಿರಕುಳ ನೀಡಿರುವುದು ಈ ಮೂಲಕ ಸಾಬೀತಾಗಿದೆ.