ಕೊನೆಗೂ ತಜ್ಞರ ತಂಡ ಇಂಜಿನಿಯರ್ಸ್ ಗಳ ಶ್ರಮ ಸಿಬ್ಬಂದಿಗಳ ಕಾರ್ಯಕ್ಷಮತೆಯಿಂದ ತುಂಗಭದ್ರಾ ಜಲಾಶಯದ ಗೇಟ್ ನಂಬರ್ 19 ಗೆ ಯಶಸ್ವಿಯಾಗಿ ಗೇಟ್ ಅಳವಡಿಸಲಾಗಿದೆ ಆ ಮೂಲಕ ಈ ಕಾರ್ಯಾಚರಣೆಯಲ್ಲಿ ಮೊದಲ ಹಂತದ ಯಶಸ್ಸು ಸಾಧಿಸಿದಂತಾಗಿದೆ.
ಜಲಾಶಯದಿಂದ ನಿರಂತರವಾಗಿ ಹರಿದು ಹೋಗುತ್ತಿದ್ದ ನೀರನ್ನು ತಡೆಯಲು ನಿನ್ನೆ ಬೆಳಗ್ಗೆಯಿಂದಲೂ ತಜ್ಞರ ತಂಡ ಸ್ಟಾಪ್ ಲಾಗ್ ಗೇಟ್ ಅಳವಡಿಸುವ ಪ್ರಯತ್ನದಲ್ಲಿ ತೊಡಗಿಸಿಕೊಂಡಿದ್ದರು. ಅಂತಿಮವಾಗಿ ಶುಕ್ರವಾರ ರಾತ್ರಿ ಈ ಕಾರ್ಯ ಯಶಸ್ವಿಯಾಗಿದೆ.
ಒಟ್ಟು ಐದು ಸ್ಟಾಪ್ ಲಲಾಗ್ ಗೇಟ್ ಗಳನ್ನ ಅಳವಡಿಸಬೇಕಿದ್ದು ಆ ಪೈಕಿ ಮೊದಲನೇ ಗೇಟ್ ಅಳವಡಿಸುವುದೇ ಸವಾಲಿನ ಕಾರ್ಯವಾಗಿತ್ತು ಇದೀಗ ಈ ಕಾರ್ಯ ಯಶಸ್ವಿಯಾಗಿದ್ದು ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.