ಇಂದು ಸಿಎಂ (cm) ತವರು ಮೈಸೂರಲ್ಲಿ (Mysore) ಆಡಳಿತರೂಢ ಕಾಂಗ್ರೆಸ್ (Congress) ಬೃಹತ್ ಜನಾಂದೋಲನ ಸಮಾವೇಶ ನಡೆಸುತ್ತಿದೆ. ದೋಸ್ತಿ ನಾಯಕರ ಪಾದಯಾತ್ರೆಗೆ ಪ್ರತಿಯಾಗಿ ಮೈಸೂರಿನಲ್ಲಿ ಜನಾಂದೋಲನಾ ಸಮಾವೇಶ ನಡೆಯುತ್ತಿದ್ದು, ಈ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ (Dom Dk shivakumar) ಹಾದಿಯಾಗಿ ಶಾಸಕರು, ಸಚಿವರು ಮತ್ತು ರಾಜ್ಯ ಉಸ್ತುವಾರಿ, ಪರಿಷತ್ ಸದಸ್ಯರು ಭಾಗಿಯಾಗಲಿದ್ದಾರೆ.
ಈ ವೇಳೆ ಕಾರ್ಯಕ್ರಮದಲ್ಲಿ ಮುಡಾ ಪ್ರಕರಣದ ಬಗ್ಗೆ ಸಿಎಂ ಸ್ಪಷ್ಟನೆ ನೀಡಲಿದ್ದು, ಜೊತೆಗೆ ಬಿಜೆಪಿ- ಜೆಡಿಎಸ್ (Bjp-jds) ಕಾಲದ ಹಗರಣ ಕುರಿತು ಪ್ರಸ್ತಾಪಿಸುವ ಸಾಧ್ಯತೆ ಇದೆ. ದೇವೇಗೌಡರ (Devegowda) ໖ (Kumaraswamy) ಇದುವರೆಗೂ ಪಡೆದಿರುವ ಸೈಟ್‌ಗಳು ಹಾಗೂ ಮೂಡಗೆ ಬರೆದಿರುವ ಪತ್ರಗಳನ್ನ ಪ್ಲೆಕ್ಸ್ ರೂಪದಲ್ಲಿ ಮೈಸೂರಿನ ಹಲವಡೆ ಅಳವಡಿಸಲಾಗಿದೆ.
ಇನ್ನು ಮತ್ತೊಂದಡೆ ಮೈತ್ರಿ ನಾಯಕರ ಪಾದಯಾತ್ರೆ ಇಂದೇ ಮೈಸೂರು ಪ್ರವೇಶಿಲಿದ್ದು, ನಾಳೆ ಮೈತ್ರಿ ಪಡೆಯಿಂದಲೂ ಮೈಸೂರಿನಲ್ಲಿ ಬೃಹತ್ ಸಮಾರೋಪ ಸಮಾರಂಭ ಆಯೋಜನೆಗೊಂಡಿದೆ. ಹೀಗಾಗಿ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ರಾಜಕಿಯ ದಾಖ – ಪ್ರತಿದಾಳ ಜೋರಾಗಿದೆ.