ಚಿಕ್ಕಮಗಳೂರಿನ ಶಕ್ತಿ ಪೀಠಗಳಲ್ಲಿ ಒಂದಾಗಿರುವ ಶೃಂಗೇರಿ ಶಾರದಾ ಪೀಠದಲ್ಲಿ ಇಂದಿನಿಂದ ವಸ್ತ್ರ ಸಂಹಿತೆ ಜಾರಿ ಮಾಡಲಾಗಿದೆ. ಪುರುಷರಿಗೆ ಪಂಚೆ, ಶಲ್ಯ ಮಹಿಳೆಯರಿಗೆ ದೋತಿ, ಸೀರೆಯನ್ನು ಉಟ್ಟು ಬರುವಂತೆ ಸೂಚನೆ ಕೊಡಲಾಗಿದ್ದು, ಇಂದಿನಿಂದ ಭಕ್ತರು ವಸ್ತ್ರ ಸಂಹಿತೆ ಪಾಲನೆ ಮಾಡುತ್ತಿದ್ದಾರೆ.
20 ದಿನದ ಹಿಂದೆ ದೇವಾಲಯ ಆಡಳಿತ ಮಂಡಳಿ ಆದೇಶ ಹೊರಡಿಸಿತ್ತು. ದೇವರು, ಗುರುಗಳ ದರ್ಶನಕ್ಕೆ ಬರುವವರು ಸಾಂಪ್ರಾದಾಯಿಕ ಉಡುಗೊರೆಯಲ್ಲಿ ಬರುವಂತೆ ಸೂಚನೆ ಕೊಡಲಾಗಿತ್ತು. ಇಂದಿನಿಂದ ಅಧಿಕೃತವಾಗಿ ವಸ್ತ್ರ ಸಂಹಿತೆ ಕಟ್ಟುನಿಟ್ಟಾಗಿ ಜಾರಿಗೆ ಬಂದಿದೆ. ದೇವಾಲಯದ ವಸ್ತ್ರ ಸಂಹಿತೆ ಆದೇಶವನ್ನು ಭಕ್ತವೃಂದ ಸ್ವಾಗತಿಸಿದೆ ಎನ್ನಲಾಗಿದೆ.