ವಾಲ್ಮೀಕಿ ನಿಗಮ ಹಗರಣದಲ್ಲಿ (Valmiki board scam) ಆರೋಪ ಹೊತ್ತು ಸಚಿವ ಸ್ಥಾನ ತ್ಯಜಿಸಿದ್ದ ಬಿ.ನಾಗೇಂದ್ರ (B nagendra) ಮತ್ತು ಶಾಸಕ ದದ್ದಲ್‌ಗೆ ಈ ಪ್ರಕರಣದಲ್ಲಿ ಕ್ಲೀನ್ ಚಿಟ್ ಸಿಕ್ಕಿದೆ. ಈ ಬೆನ್ನಲ್ಲೇ ಸುದ್ದಿಗೋಷ್ಟಿ ನಡೆಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ (B Y Vijayendra) ಸರ್ಕಾರ ಉಳಿಸಿಕೊಳ್ಳೋಕೆ ಸಿಎಂ ಕಸರತ್ತು ಮಾಡ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಈ ಎಲ್ಲಾ ಕಸರತ್ತುಗಳು ಪ್ರಯೋಜನವಾಗೋದಿಲ್ಲ. ಈಗ ಏನೇ ಮಾಡಿದ್ರು ಸಿದ್ದರಾಮಯ್ಯ OUT GOING CM. ಯಾವಾಗ ಬೇಕಾದ್ರು ಸಿಎಂ ತಮ್ಮ ಖುರ್ಚಿಯಿಂದ ಕೆಳಗಿಳಿಯಬಹುದು ಅಂತ ಹೇಳಿದ್ದಾರೆ.
ಇನ್ನು, ಇತ್ತೀಚೆಗೆ ಡಿಸಿಎಂ ಡಿಕೆಶಿಯವರು (Dem dk shlakumar) ಪತ್ನಿ ಸಮೇತರಾಗಿ ಜಮ್ಮು ಕಾಶ್ಮೀರದ ವೈಷ್ಣದೇವಿಯ ದೇವಾಲಯಕ್ಕೆ ಭೇಟಿ ಕೊಟ್ಟಿದ್ದರ ಬಗ್ಗೆ ಪರೋಕ್ಷವಾಗಿ ಕುಕ್ಕಿದ ವಿಜಯೇಂದ್ರ ಡಿಕೆಶಿ ದೇವರ ಆಶಿರ್ವಾದ ಪಡೆದು ಬಂದು ಅನಿಸುತ್ತೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಡಿಕೆಶಿ ಸಿಎಂ ಕುರ್ಚಿಗೆ ಕಸರತ್ತು ನಡೆಸಿದ್ದಾರೆ ಅಂತ ವಿಜಯೇಂದ್ರ ಹೇಳಿದ್ರು.