ಪ್ರಧಾನಿ ನರೇಂದ್ರ ಮೋದಿ (Pm narendra modi) ಯುದ್ಧಪೀಡಿತ ರಾಷ್ಟ್ರ ಉಕ್ರೇನ್‌ಗೆ (Ukraine) ಭೇಟಿ ನೀಡಿದ್ದಾರೆ. ಆಶ್ಚರ್ಯ ಅಂದ್ರೆ. ಮೋದಿ (Modi) ಮೀತ್ರ ರಾಷ್ಟ್ರ ರಷ್ಯಾಕ್ಕೆ ಭೇಟಿ ನೀಡಿದ ಕೇವಲ 6 ವಾರಗಳ ಅಂತರದಲ್ಲಿ ಉಕ್ರೇನ್‌ಗೆ ಭೇಟಿ ನೀಡಿದ್ದು, ವಿಶ್ವಮಟ್ಟದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಧೀರ್ಘ ಕಾಲದಿಂದ ರಷ್ಯಾ-ಉಕ್ರೇನ್ ಯುದ್ಧ ನಡೆಯುತ್ತಿದ್ದ, ನಿಲ್ಲುವ ಲಕ್ಷಣಗಳೇ ಕಾಣುತ್ತಿಲ್ಲ. ಹೀಗಾಗಿ ನಮೋ ಈ ಎರಡೂ ದೇಶಗಳ ನಡುವೆ ಶಾಂತಿ ಸಂಧಾನ ನಡೆಸುತ್ತಾರಾ ಅನ್ನೋ ಕುತೂಹಲ ಮೂಡಿದೆ.
ಈಗಾಗಲೇ ರಷ್ಯಾಗೆ ಭೇಟಿ ಕೊಟ್ಟ ಸಂದರ್ಭದಲ್ಲಿ ಇದು ಯುದ್ಧದ ಕಾಲವಲ್ಲ ಅಂತ ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್‌ಗೂ (Putin) ಶಾಂತಿ ಮಂತ್ರ ಹೇಳಿರುವ ಮೋದಿ, ಯಾರ ಪರವೂ ವಹಿಸದೇ ಎರಡು ದೇಶಗಳ ಮಧ್ಯೆ ಶಾಂತಿ ಸಂಧಾನದ ಮಾತುಕತೆ ನಡೆಸಲಿದ್ದಾರೆ ಎಂದು ಭಾವಿಸಲಾಗಿದೆ.