ಕೋಲ್ಕತ್ತಾದ ಆರ್.ಜಿ.ಕರ್ ಆಸ್ಪತ್ರೆ ವೈದ್ಯೆಯ ರೇಪ್ ಮತ್ತು ಕೊಲೆ ಪ್ರಕರಣದಲ್ಲಿ ಆರ್‌ಜಿ.ಕರ್ ಆಸ್ಪತ್ರೆಯ ಐವರು ವೈದ್ಯರಿಗೆ ಸಿಬಿಐ ಸಮನ್ಸ್ ಜಾರಿ ಮಾಡಿದೆ.

ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೇವಲ ಪಶ್ಚಿಮ ಬಂಗಾಳ ಮಾತ್ರವಲ್ಲದೆ, ದೇಶದಾದ್ಯಂತ ಈ ಪ್ರಕರಣದ ಕುರಿತು ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಹೀಗಾಗಿ ಈ ಪ್ರಕರಣವನ್ನು ಸಿ.ಬಿ.ಐ ಗೆ ಹಸ್ತಾಂತರಿಸಲಾಗಿದೆ.
ತನಿಖೆ ಚುರುಕುಗೊಳಿಸಿರುವ ಸಿಬಿಐ, ಐವರು ವೈದ್ಯರನ್ನು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದೆ. ಈ ಪೈಕಿ ಈಗಾಗಲೇ ಅಮಾನತುಗೊಂಡಿರುವ MSVP ಸಂಜಯ್ ವಶಿಷ್ಠ ಮತ್ತು HOD ಅರುಣವ ದತ್ತಾ ಚೌಧರಿ ಕೂಡ ಸೇರಿದ್ದಾರೆ .