ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy murder case) ಆರೋಪಿ ದರ್ಶನ್‌ರನ್ನ (Actor darshan)ಪೊಲೀಸರು ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ (bellary jail)| ಶಿಫ್ಟ್ ಮಾಡಲಾಗಿದೆ. ಆರೋಪಿ ದರ್ಶನ್ ಗೆ ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ ಸಿಗುತ್ತಿತ್ತು ಎಂಬ ಹಿನ್ನೆಲೆ, ಈ ಪ್ರಕರಣದ ಎಲ್ಲಾ ಆರೋಪಿಗಳನ್ನ ಬೇರೆ ಬೇರೆ ಜೈಲಿಗೆ ಶಿಫ್ಟ್ ಮಾಡಲಾಗಿದೆ.

ಸದ್ಯ ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿದ್ದಾರೆ. ಆರೋಪಿ ದರ್ಶನ್‌ರನ್ನ ಶಿಫ್ಟ್ ಮಾಡುವ ಸಂದರ್ಭದಲ್ಲಿ ಸೆಕ್ಯುರಿಟಿಯ ಬಗ್ಗೆ ಪೋಲೀಸರು ಸಂಪೂರ್ಣ ನಿಗಾ ವಹಿಸಿದ್ದಾರೆ. ಹೀಗಾಗಿ ಬೆಳಗ್ಗೆ 4 ಗಂಟೆ ಸುಮಾರಿಗೆ ಪರಪ್ಪನ ಅಗ್ರಹಾರದಿಂದ ಬಿಗಿ ಭದ್ರತೆಯಲ್ಲಿ ದರ್ಶನ್ ರನ್ನ ಕರೆತರಲಾಗಿದೆ.
ತುಮಕೂರು – ಚಿತ್ರದುರ್ಗ ಮಾರ್ಗದ ಬದಲಾಗಿ, ಚಿಕ್ಕಬಳ್ಳಾಪುರ- ಬಾಗೇಪಲ್ಲಿ ಅನಂತಪುರ ಮಾರ್ಗವಾಗಿ ದರ್ಶನ್‌ರನ್ನ ಬಳ್ಳಾರಿ ಜೈಲಿಗೆ ಕರೆತರಲಾಗಿದೆ. ಬಳ್ಳಾರಿ ಕಾರಾಗೃಹದಲ್ಲಿ ಕಲ್ಲುಗಂಬದ ಗೋಡೆಗಳು, ರಣ ಬಿಸಿಲಿಗೆ ದರ್ಶನ್ ಒಗ್ಗಿಕೊಳ್ಳುವುದು ಬಹಳ ಕಷ್ಟ ಎನ್ನಲಾಗ್ತಿದೆ.