ನಮ್ಮ ಮೆಟ್ರೋಗೆ ಹಾರಿ ಪ್ರಾಣ ಕಳೆದುಕೊಳ್ಳಲು ಯತ್ನಿಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದೆ. ನಿನ್ನೆ ಕೂಡ ಅಂತಹದ್ದೇ ಘಟನೆ ದೊಡ್ಡಕಲ್ಲಸಂದ್ರದ ಮೆಟ್ರೋ ನಿಲ್ದಾಣದಲ್ಲಿ ನಡೆದಿದೆ. ಮೆಟ್ರೋ ನಿಲ್ದಾಣದಲ್ಲಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಉತ್ತರಪ್ರದೇಶ ಆಲಿಘರ್ ಮೂಲದ ನವೀನ್ ಕುಮಾರ್ ಅರೋರಾ ಎಂದು ಗೊತ್ತಾಗಿದೆ.

ಮೃತ ನವೀನ್ ಕುಮಾರ್ ಬೆಂಗಳೂರಿನ ಮಾರ್ಕೆಟ್‌ನಲ್ಲಿ ಹಾರ್ಡ್ ವೇರ್ ಅಂಗಡಿ ನಡೆಸುತ್ತಿದ್ದ. ಕಳೆದ ಐದಾರು ವರ್ಷದ ಹಿಂದೆ ಬ್ಯುಸಿನೆಸ್ ಲಾಸ್ ಆಗಿತ್ತು. ಹೀಗಾಗಿ ನವೀನ್ ಸಂಪೂರ್ಣ ಉದ್ಯೋಗ ಕಳೆದುಕೊಂಡು, ಕುಟುಂಬದಿಂದ ಬೇರೆಯಾಗಿ ಒಂಟಿ ಜೀವನ ನಡೆಸುತ್ತಿದ್ದ ಎನ್ನಲಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸುರ ಪರಿಶೀಲನೆ ನಡೆಸಿ, ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಕಿಮ್ಸ್‌ಗೆ ಶಿಫ್ಟ್ ಮಾಡಿದ್ದಾರೆ.
ಈ ರೀತಿಯ ಪ್ರಕರಣಗಳು ಆಗಾಗ್ಗೆ ಮರುಕಳಿಸುತ್ತಿರುವುದರಿಂದ, ಇದನ್ನು ತಡೆಗಟ್ಟಲು ಬಿಎಂಆರ್‌ಸಿಎಲ್ ಕೂಡ ಇನ್ಮುಂದೆಯಾದ್ರು ಅಗತ್ಯ ಕ್ರಮ ಕೈಗೊಳ್ಳಬೇಕಿದೆ. ಮುನ್ನೆಚ್ಚರಿಕಾ ಕ್ರಮಗಳು ಮತ್ತು ಸಿಬ್ಬಂದಿಯ ನಿರ್ಲಕ್ಷ್ಯಕ್ಕೆ ಕಡಿವಾಣ ಬಿದ್ರೆ ಇಂಥ ಘಟನೆಗಳು ನಡೆಯುವುದಿಲ್ಲ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.