ಸ್ಯಾಂಡಲ್‌ವುಡ್ (Sandalwood) ಖ್ಯಾತ ನಿರ್ದೇಶಕ ತರುಣ್ ಸುಧೀರ್ (Tarun sudheer) ಹಾಗೂ ನಟಿ ಸೋನಾಲ್ ಮೊಂಥೇರೊ (Sonal montero) ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕುಟುಂಬಸ್ಥರು, ಆಪ್ತರು ಮತ್ತು ಚಿತ್ರರಂಗಂದ ಗಣ್ಯರ ಸಮ್ಮುಖದಲ್ಲಿ ಮೈಸೂರು ರಸ್ತೆಯಲ್ಲಿನ ಪೂರ್ಣಿಮಾ ಪ್ಯಾಲೆಸ್‌ನಲ್ಲಿ (Poorinma palae) ತರುಣ್-ಸೋನಾಲ್ ಸಪ್ತಪದಿ ತುಳಿದಿದ್ದಾರೆ.
ಈ ಮದುವೆ ಸಮಾರಂಭಕ್ಕೆ ಸ್ಯಾಂಡಲ್‌ವುಡ್‌ನ ಸಾಕಷ್ಟು ತಾರೆಗಳು ಆಗಮಿಸಿ ನೂತನ ಜೋಡಿಗೆ ಶುಭ ಹಾರೈಸಿದ್ದಾರೆ. ಹಿರಿಯ ನಟ ಮುಖ್ಯಮಂತ್ರಿ ಚಂದ್ರು, ಶೃತಿ, ಶರಣ್, ನೆನಪಿರಲಿ ಪ್ರೇಮ್ ಸೇರಿದಂತೆ ಚಿತ್ರರಂಗದ ಹಲವು ನಟ-ನಟಿಯರು, ಹಿರಿಯ ಕಲಾವಿದರು ಹಾಗೂ ಗಣ್ಯರು ತರುಣ್- ಸೋನಾಲ್ ವಿವಾಹದಲ್ಲಿ ಭಾಗಿಯಾಗಿದ್ರು.
ಪರಸ್ಪರ ಪ್ರೀತಿಯಲ್ಲಿದ್ದ ಈ ಜೋಡಿ ಎರಡೂ ಕುಟುಂಬವನ್ನೂ ಒಪ್ಪಿಸಿ, ಹಿಂದೂ ಸಂಪ್ರದಾಯದಂತೆ ಇಂದು ಗೃಹಸ್ತಾಶ್ರಮಕ್ಕೆ ಕಾಳಿಟ್ಟಿದ್ದಾರೆ. ಆ ಮೂಲಕ ಸ್ಯಾಂಡಲ್‌ವುಡ್ ನ ಸ್ಟಾರ್ ಜೋಡಿಗಳ ಸಾಲಿಗೆ ಇದೀಗ ತರುಣ್ ಮತ್ತು ಸೋನಲ್ ಜೋಡಿ ಸೇರ್ಪಡೆಯಾಗಿದೆ.