ಮಂಡ್ಯ ನಗರಸಭೆಯ (mandya orporation election) ಅಧ್ಯಕ್ಷ ಮತ್ತು ಉಪಾಧ್ಯಕ್ಷ ಪಟ್ಟ ಜೆಡಿಎಸ್ (Jds) ಪಾಲಾಗಿದೆ. ಆ ಮೂಲಕ ಮಂಡ್ಯ ನಗರಸಭೆ ಪಾರುಪತ್ಯವನ್ನ ಜೆಡಿಎಸ್ ವಶಪಡಿಸಿಕೊಂಡಿದೆ. ಈ ಚುನಾವಣೆ ತೀವ್ರ ಕುತೂಹಲಕ್ಕೆ ಕಾರಣವಾಗಿತ್ತು. ಏಕೆಂದರೆ ಈ ನರಸಭೆ ಎಲೆಕ್ಷನ್ ಕೇಂದ್ರ ಸಚಿವ ಕುಮಾರಸ್ವಾಮಿ (HD kumaraswamy) ಮತ್ತು ಚೆಲುವರಾಯ ಸ್ವಾಮಿ (cheluvaraya swamy) ನಡುವಿನ ಪ್ರತಿಷ್ಠೆಯ ಜಿದ್ದಾ ಜಿದ್ದಿನ ಕಣವಾಗಿ ಮಾರ್ಪಾಡಾಗಿತ್ತು.
ಹೀಗಾಗಿ ಕಾಂಗ್ರೆಸ್ (Congress) ಪಾಳಯ ಅಪರೇಷನ್ ನಡೆಸುವ ಪ್ರಯತ್ನ ಮಾಡಿತ್ತಾದ್ರೂ, ಅದಕ್ಕೆ ಸೆಡ್ಡು ಹೊಡೆದು ಜೆಡಿಎಸ್ ಈ ಚುನಾವಣೆಯಲ್ಲಿ ಗೆಲುವು ಸಾದಿಸಿದೆ. ಆ ಮೂಲಕ ಪರೋಕ್ಷವಾಗಿ ಚಲುವರಾಯಸ್ವಾಮಿ ವಿರುದ್ಧ ಕುಮಾರಸ್ವಾಮಿಗೆ ಗೆಲುವು ಸಾಧಿಸಿದಂತೆ ಸಂದೇಶ ರವಾನೆಯಾಗಿದೆ. ಜೆಡಿಎಸ್ ನಿಂದ ನಾಗೇಶ್ ಅಧ್ಯಕ್ಷರಾಗಿಯೂ, ಅರುಣ್ ಕುಮಾರ್ ಉಪಾಧ್ಯಕ್ಷರಾಗಿಯೂ ಆಯ್ಕೆಯಾಗಿದ್ದಾರೆ. ಇಲ್ಲಿ 35 ಸದಸ್ಯ ಬಲದಲ್ಲಿ ಜೆಡಿಎಸ್ಗೆ 19 ಮತ, ಕಾಂಗ್ರೆಸ್ 18 ಮತಗಳು ಸಿಕ್ಕಿವೆ. ಆ ಮೂಲಕ ಕೇವಲ 1 ಮತದ ಅಂತರದಿಂದ ಕಾಂಗ್ರೆಸ್ ಸೋಲನುಭವಿಸಿದೆ.
ಜೆಡಿಎಸ್ ನ ಎಲ್ಲಾ 15 ಮತಗಳು ಜೊತೆಗೆ ಬಿಜೆಪಿಯ 2 ವೋಟ್, ಓರ್ವ ಸಂಸದರ ಮತ ಸೇರಿ, ಆಪರೇಷನ್ ಮೂಲಕ ಕಾಂಗ್ರೆಸ್ನ ಓರ್ವ ಸದಸ್ಯನ ಮತವನ್ನ ಜೆಡಿಎಸ್ ಟೀಮ್ ಪಡೆದುಕೊಂಡಿದ್ದು 1 ಮತ ಸೆಳೆದು ಬಹುಮತ ಸಾಧಿಸುವಲ್ಲಿ ಕುಮಾರಸ್ವಾಮಿ ಯಶಸ್ವಿಯಾಗಿದ್ದಾರೆ. ಇತ್ತ ಕಾಂಗ್ರೆಸ್ 9 ಮತದ ಜೊತೆಗೆ, ಪಕ್ಷೇತರರ 5 ಮತಗಳು, ಓರ್ವ ಶಾಸಕ ಹಾಗೂ ಆಪರೇಷನ್ ಮೂಲಕ 3 ಮತ ಹಿಡಿದಿಟ್ಟುಕೊಂಡಿತ್ತಾದರೂ, ಗೆಲುಉ ಸಾಧ್ಯವಾಗಿಲ್ಲ.