
ಮಹಾರಾಜ ಕಾಲೇಜು ಮೈದಾನಕ್ಕೆ ಭೇಟಿ ನೀಡಿ ಸ್ವಚ್ಚತಾ ಕಾರ್ಯದಲ್ಲಿ ಭಾಗಿಯಾದ ಯದುವೀರ್
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ತಮ್ಮ ಪತ್ನಿ ತ್ರಿಶಿಖಾ ಒಡೆಯರ್ ಅವರೊಂದಿಗೆ ಮಹಾರಾಜ ಕಾಲೇಜು ಮೈದಾನಕ್ಕೆ ಭೇಟಿ ನೀಡಿ ಮೈದಾನವನ್ನು ಸ್ವಚ್ಛಗೊಳಿಸಲು ಪಾಲ್ಗೊಂಡರುಮೋದಿ ರ್ಯಾಲಿ ನಂತರ ಮೈದಾನ ಜನ ಜಂಗುಳಿ ಯಿಂದ ಕಸ ತುಂಬಿತ್ತು.ಅಲ್ಲಲ್ಲಿ ಹರಡಿದ್ದ ಕಸವನ್ನು ಹಾಯ್ದು ಯದುವೀರ್ ಅವರೊಂದಿಗೆ ಅವರ ಅಭಿಮಾನಿಗಳು ಮತ್ತು ನಗರಪಾಲಿಕೆ ಸಿಬ್ಬಂದಿಗಳು ಸೇರಿ ಸ್ವಚ್ಚಗೊಳಿಸಿದರು.

ಇಂದು ಸ್ವಚ್ಚತಾ ಕಾರ್ಯದಲ್ಲಿ ಭಾಗಿಯಾದ ಕಾರ್ಮಿಕರಿಗೆ ಯದುವೀರ್ ಅವರು ಕೃತಜ್ಞತೆ ಸಲ್ಲಿಸಿದರು.ಹಾಗೆ ಕಸವನ್ನು ಆದಷ್ಟು ಬೇಗ ಮೈದಾನದಿಂದ ತೆರವುಗೊಳಿಸುವಂತೆ ಮನವಿ ಮಾಡಿದರು.ತ್ರಿಶಿಖಾ ಅವರೊಂದಿಗೆ ಯದುವೀರ್ ಕೂಡ ತ್ಯಾಜ್ಯವನ್ನು ಆರಿಸುತ್ತಿದ್ದರು.ಎಲ್ಲರ ಗಮನ ಸೆಳೆಯಿತು.
ಕೆಲವು ಸ್ವಯಂಸೇವಕರು ಕೂಡ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡರು.