ಪರಪ್ಪನ ಅಗ್ರಹಾರ ಜೈಲಲ್ಲಿನ (Parapoana agrahara) ನಟ ದರ್ಶನ್ (Actor darshan) ಬಿಂದಾಸಾಗಿರುವ ಪೊಟೋಗಳು ವೈರಲ್ ಆಗ್ತಿದ್ದಂತೆ, ಕೆಲ ದರ್ಶನ್ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ (social media) ಚಿತ್ರ ವಿಚಿತ್ರ ಪೋಸ್ಟ್ ಗಳನ್ನ ಹಾಕುತ್ತಿದ್ದಾರೆ. ನಟ ದರ್ಶನ್ ನ ಸಮರ್ಥಿಸಿಕೊಂಡು ಅಭಿಮಾನಿಗಳು ಸಾಲು ಸಾಲು ಪೋಸ್ಟ್ ಗಳನ್ನ ಹಾಕಿದ್ದಾರೆ.

ಸದ್ಯ ಜೈಲ್ ನಿಂದ ಲೀಕ್ ಆಗಿರುವ ದರ್ಶನ್ ಫೋಟೋಗಳನ್ನ ಎಡಿಟ್ ಮಾಡಿ, ಆ ಗತ್ತು, ಗಾಂಭೀರ್ಯ ಎಲ್ಲಿ ಇದ್ರು ಕಡಿಮೆ ಆಗಲ್ಲ, ಜೈ ಡಿ ಬಾಸ್ (Dboss)ಅಂತ ವಿಚಿತ್ರವಾದ ಪೋಸ್ಟ್ ಗಳನ್ನ ಷೇರ್ ಮಾಡ್ತಿದ್ದಾರೆ.
ಜೊತೆಗೆ ದರ್ಶನ್ ಗೆ ಜೈಲೂಟ ಸರಿಯಾಗದೆ 10 ಕೆಜಿ ತೂಕ ಕಡಿಮೆಯಾಗಿದ್ದರೆ ಎಂದೆಲ್ಲ ಸುದ್ದಿಗಳು ಹರಿದಾಡಿತ್ತು. ಈ ಫೋಟೋ ನೋಡಿದ ಮೇಲೆ, ಯಾರೋ ಹೇಳಿದ್ದು Boss ಸಣ್ಣ ಆಗಿದರೆ ಅಂತಾ?ಹಾಗೆ ಹೀಗೆ ಅಂತ ದರ್ಶನ್ ಕೆಲ ಅಭಿಮಾನಿಗಳು ಅಂಧಾಭಿಮಾನ ಮೆರೆದಿದ್ದಾರೆ.