ಆಗಸ್ಟ್ 10ರ ತಡರಾತ್ರಿ ತುಂಗಭದ್ರಾ ಜಲಾಶಯದ (Tungd bhadra dam) 19ನೇ ಗೇಟ್ ನ ಚೈನ್ ಲಿಂಕ್ ಕಟ್ ಆಗಿ ಸಂಭವಿಸಿದ್ದ ಅವಘಡಕ್ಕೆ ಸಂಭಂದಪಟ್ಟಂತೆ ಇದೀಗ ತಜ್ಞರ ತಂಡ ಸಾಕಷ್ಟು ಸ್ಥಳ ಪರೀಶೀಲನೆ ನಡೆಸಿ ಇದೀಗ ರಿಪೇರಿ ಕಾರ್ಯ ಆರಂಭಿಸುವ ಸಿದ್ಧತೆಯಲ್ಲಿದ್ದಾರೆ. ಈಗಾಗಲೇ 21 ಟಿಎಂಸಿ (21 TMC) ನೀರನ್ನ ಜಲಾಶಯದಿಂದ ಹೊರಬಿಡಲಾಗಿದೆ.

ತುಂಗಭದ್ರಾ ಜಲಾಶಯದ ಗೇಟ್ ಫಿಕ್ಸ್ ಮಾಡೋ ಕೆಲಸ ಇಂದಿನಿಂದ ಶುರುವಾಗೋ ಸಾಧ್ಯತೆ ಇದೆ. ನಿನ್ನೆ ಸಿಎಂ ಸಿದ್ದರಾಮಯ್ಯ (Cm siddaramiah) ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನೀರಿನ ಜೊತೆ ಗೇಟ್ ಅಳವಡಿಸಲು ಸಾದ್ಯ ಸಾಧ್ಯತೆಗಳ ಬಗ್ಗೆ ಎಕ್ಸ್‌ಪರ್ಟ್‌ಗಳ ಜೊತೆ ಚರ್ಚೆ ಮಾಡಿದ್ದಾರೆ.

ಈ ಹಿನ್ನಲೆ ನೀರನ್ನ ಉಳಿಸಲು ಪರಿಣಿತರಾದ ಡ್ಯಾಂ ಇಂಜಿನಿಯರ್ ಕನ್ನಯ್ಯ ನಾಯ್ಡು ಅವರ ತಂಡ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ. ಸದ್ಯ ಡ್ಯಾಮ್‌ಗೆ 20 ಮೀಟರ್, 12 ಮೀಟರ್ ಮದ್ಯ ಕಟ್ ಮಾಡಿ ಶೆಟರ್ಸ್ ಹಾಕಲಾಗುತ್ತದೆ. ಹೀಗಾಗಿ ಬಳ್ಳಾರಿಯ ಜಿಂದಾಲ್ ನಿಂದ ಬೃಹತ್ ಯಂತ್ರಗಳು ಬಂದಿದ್ದು, ಇಂದಿನಿಂದ ಗೇಟ್ ಅಳವಡಿಸೋ ಕಾರ್ಯಾ ಶುರುವಾಗೋ ಸಾಧ್ಯತೆಗಳಿವೆ.
			
                                
                                
                                