ಕಳೆದ ಬಾರಿ ರಾಜ್ಯದಲ್ಲಿ ಸಾಕಷ್ಟು ಹೈಡ್ರಾಮಗೆ ಕಾರಣವಾಗಿದ್ದ ಹುಬ್ಬಳ್ಳಿಯ (Hubli) ಇದ್ದಾ ಮೈದಾನದಲ್ಲಿ ಗಣೇಶೋತ್ಸವ (Ganesha festival) ಆಚರಣೆಯ ವಿಚಾರ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಈ ಬಾರಿಯೂ ಈದ್ದಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಅನುಮತಿ ಸಿಕ್ಕಿದೆ.
ಈ ಬಾರಿ ರಾಣಿ ಚೆನ್ನಮ್ಮ ಮೈದಾನ (Rani chennamma ground), ಗಜಾನನ ಉತ್ಸವ ಗಣೇಶೋತ್ಸವದ ಆಚರಣೆಗೆ ಅವಕಾಶ ನೀಡಿದೆ. ಸೆಪ್ಟೆಂಬರ್ 7 ರಂದು ಗಣೇಶ ಪ್ರತಿಷ್ಠಾಪನೆ ಮಾಡಿ ಬಳಿಕ ಸೆಪ್ಟೆಂಬರ್ 9ರಂದು ಗಣೇಶ ವಿಸರ್ಜನೆ ಮಾಡುವಂತೆ ಸೂಚಿಸಿ ಮೂರು ದಿನಗಳ ಆಚರಣೆಗೆ ಪಾಲಿಕೆ ಕಮಿಷನರ್ ಈಶ್ವರ್ ಉಳ್ಳಾಗಡ್ಡಿ ಅನುಮತಿ ನೀಡಿದ್ದಾರೆ.
ಈ ಮೂಲಕ ಸತತ ಮೂರನೇ ವರ್ಷ ಹುಬ್ಬಳ್ಳಿಯ ಈದ್ದಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ಸಿಕ್ಕಂತಾಗಿದೆ.