ನಮ್ಮ ಕರ್ನಾಟಕದ (Karnataka) ಮೂಲದ HMT ಕಂಪನಿಯ 500 ಎಕರೆ ಜಾಗದ ಪೈಕಿ ಅನಧಿಕೃತವಾಗಿ ಒತ್ತುವರಿ ಮಾಡಿರುವ 281 ಎಕರೆ ಜಾಗವನ್ನ ಅರಣ್ಯ ಇಲಾಖೆ ವಶಕ್ಕೆ ಪಡೆಯೋದಾಗಿ ಅರಣ್ಯ ಸಚಿವ ಈಶ್ವರ್ ಖಂಡ್ರೆ (Eshwar khandre) ಆದೇಶಿದ್ದಾರೆ.
ಈ ವಿಚಾರವಾಗಿ ಇದೀಗ ಅರಣ್ಯ ಸಚಿವ ಈಶ್ವರ್ ಖಂಡ್ರೆ ಮತ್ತು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ (HD kumaraswamy) ಮಧ್ಯೆ ಮಾತಿನ ಚಕಮಕಿಗೆ ಕಾರಣವಾಗಿದೆ. ಈ ಕೃತ್ಯದ ಮೂಲಕ HMT ಕಂಪನಿಯನ್ನ ಮುಚ್ಚಲು ಹೊರಟಿದ್ದಾರೆ ಅಂತ ಆಕ್ರೋಶ ಹೊರಹಾಕಿದ ಹೆಚ್‌ಡಿ ಕುಮಾರಸ್ವಾಮಿ, ಜಾರ್ಖಂಡ್‌ನಲ್ಲೂ ಹೆಚ್‌ಎಂಟಿ ವಾಚ್ ಬಳಕೆಯಾಗ್ತಿರೋ ಬಗ್ಗೆ ಪ್ರಸ್ತಾಪಿಸಿದ್ರು.
ಇದೇ ಸಂದರ್ಭದಲ್ಲಿ ಅರಣ್ಯ ಸಚಿವರನ್ನು ಪ್ರಶ್ನೆ ಮಾಡಿದ ಕುಮಾರಸ್ವಾಮಿ, ನಿಮಗೆ ಸ್ವಾಭಿಮಾನ ಇಲ್ವಾ ಅಂತ ರಾಜ್ಯ ಸರ್ಜಾರದ ವಿರುದ್ಧ ಬೇಸರ ಹೊರಹಾಕಿದ್ದಾರೆ.. ಅತ್ತ ಹೆಚ್‌ಡಿಕೆ ಮಾತಿಗೆ ತಿರುಗೇಟು ಕೊಟ್ಟಿರುವ ಸಚಿವ ಈಶ್ವರ್ ಖಂಡ್ರೆ, ನಾನು ಯಾವುದೇ ದ್ವೇಷದ ರಾಜಕಾರಣ ಮಾಡಲ್ಲ ಅದು ಒತ್ತುವರಿ ಜಾಗ ಎಂದು ಸಮಜಾಯಿಷಿ ಕೊಟ್ಟಿದ್ದಾರೆ.