ರಾಜ್ಯಪಾಲ ಥಾವರ್ ಚಂದ್ ಗೆಹೋಟ್ ನೀಡಿದ್ದ ಶೋಕಾಸ್ ನೋಟಿಸ್‌ಗೆ ಸಿಎಂ ಸಿದ್ದರಾಮಯ್ಯ (cm Siddaramaiah) ಉತ್ತರ ನೀಡಿದ್ದಾರೆ. ಮುಡಾ ಪ್ರಕರಣ ಸಂಬಂಧ ಎಲ್ಲಾ ದಾಖಲೆಗಳೊಂದಿಗೆ ಸುಮಾರು ಎಪ್ಪತ್ತು ಪುಟಗಳ ಸುದೀರ್ಘ ಉತ್ತರ ನೀಡಿದ್ದಾರೆ.

ಈ ಹಗರಣದ ಆರೋಪದ ಬಗ್ಗೆ ಉತ್ತರಿಸಿರುವ ಸಿದ್ದು, ನಾನು ಯಾವುದೇ ತಪ್ಪು ಮಾಡಿಲ್ಲ. ಸ್ವಜನ ಪಕ್ಷಪಾತ, ಅಧಿಕಾರ ದುರ್ಬಳಕೆ ಮಾಡಿಕೊಂಡಿಲ್ಲ. ತಾವು ನನಗೆ ನೀಡಿರುವ ಶೋಕಾಸ್ ನೋಟಿಸ್ ಕೂಡ ಕ್ರಮಬದ್ಧವಾಗಿಲ್ಲ ಎಂದು ಇದ್ರಲ್ಲಿ ಉಲ್ಲೇಖಿಸಿದ್ದಾರೆ.
ಟಿ.ಜೆ.ಅಬ್ರಾಹಂ (T J Abraham) ನೀಡಿರುವ ದೂರಿನ ಅರ್ಜಿ ಕೇವಲ ದುರುದ್ದೇಶದಿಂದ ಕೂಡಿದ್ದು, ಇದನ್ನು ನೀವು ತಿರಸ್ಕರಿಸಿ ಅಂತ ಸಿಎಂ ಸಿದ್ದರಾಮಯ್ಯ ರಾಜ್ಯಪಾಲರಿಗೆ (Governer) ನೀಡಿರುವ ಉತ್ತರದಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ.






