ಪಂಚಭೂತಗಳಲ್ಲಿ ಹಿರಿಯ ನಟ ದ್ವಾರಕೀಶ್ ಲೀನರಾಗಿದ್ದಾರೆ. ಹಿಂದೂ ಬ್ರಾಹ್ಮಣ ಸಂಪ್ರದಾಯದಂತೆ ಅಂತಿಮ ವಿಧಿವಿಧಾನ ನೆರವೇರಿದೆ.ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ಅವರ ಅಂತ್ಯಕ್ರಿಯೆ ಬುಧವಾರ ಚಾಮರಾಜಪೇಟೆ ಕೆ.ಆರ್ ಮಿಲ್ ಬಳಿ ಇರುವ ಬ್ರಾಹ್ಮಣರ ಚಿತಾಗಾರದಲ್ಲಿ ನೆರವೇರಿದೆ. ಅದಕ್ಕೂ ಮುನ್ನ ದ್ವಾರಕೀಶ್ ಅವರ ಅಂತಿಮ ದರ್ಶನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕನ್ನಡ ಚಿತ್ರರಂಗದ ಗಣ್ಯರು ಸೇರಿದಂತೆ, ಸಾವಿರಾರು ಜನರು ಅಗಲಿದ ಕಲಾವಿದನಿಗೆ ಅಂತಿಮ ನಮನ ಸಲ್ಲಿಸಿದರು.
12.30ಕ್ಕೆ ರವೀಂದ್ರ ಕಲಾಕೇತ್ರದಿಂದ ದ್ವಾರಕೀಶ್ ಅವರ ಪಾರ್ಥಿವ ಶರೀರವನ್ನ ಚಾಮರಾಜಪೇಟೆಯ ಟಿಆರ್ ಮಿಲ್ಗೆ ತರಲಾಯಿತು. ನಂತರ ಪುತ್ರ ಯೋಗಿ ಸೇರಿದಂತೆ ಅವರ ಕುಟುಂಬ ವರ್ಗದಿಂದ ಬ್ರಾಹ್ಮಣ ಸಂಪ್ರದಾಯದಂತೆ ಅಂತಿಮ ವಿಧಿವಿಧಾನಗಳ ಕಾರ್ಯ ನಡೆಸಲಾಯಿತು. ಚಿತ್ರರಂಗಕ್ಕೆ ದ್ವಾರಕೀಶ್ ಅವರ ಕೊಡುಗೆಗೆ ರಾಜ್ಯ ಸರ್ಕಾರದಿಂದ ಪೊಲೀಸ್ ಗೌರವ ಸಲ್ಲಿಸಲಾಯಿತು. ಅದರಂತೆ ದ್ವಾರಕೀಶ್ ಅವರ ಮೂವರು ಪುತ್ರರು ತಂದೆಯ ಪಾರ್ಥಿವ ಶರೀರಕ್ಕೆ ಅಗ್ನಿ ಸ್ಪರ್ಶ ಮಾಡಲಾಯಿತು.
ಸ್ಯಾಂಡಲ್ವುಡ್ ನಟರಾದ ಸುದೀಪ್, ರಾಘವೇಂದ್ರ ರಾಜ್ಕುಮಾರ್, ಚಿನ್ನೇಗೌಡ, ರವಿಚಂದ್ರನ್ , ಶ್ರೀಮುರಳಿ, ರಮೇಶ್ ಅರವಿಂದ್, ದೇವರಾಜ್, ಶಶಾಂಕ್, ಮುಖ್ಯಮಂತ್ರಿ ಚಂದ್ರು, ಬಾಲಾಜಿ, ಸಾಹಿತಿ ವಿ. ನಾಗೇಂದ್ರ ಪ್ರಸಾದ್ ಕುಮಾರ್ ಬಂಗಾರಪ್ಪ, ಮಾಳವಿಕ ಅವಿನಾಶ್, ಸುಧಾರಾಣಿ, ಹಿರಿಯ ಕಲಾವಿದರಾದ ಉಮೇಶ್ ಹಾಗೂ ಡಿಂಗ್ರಿ ನಾಗರಾಜ್ ಸೇರಿ ಹಲವರು ಅಂತಿಮ ದರ್ಶನ ಪಡೆದರು.
Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್ ಕೊಟ್ಟ ನಟಿ ಭಾವನಾ..!!
ನಟಿ ಭಾವನಾ ಈಗ ತಾಯಿ! ಮದ್ವೆ ಆಗದೆ ಅವಳಿ ಮಕ್ಕಳಿಗೆ ಅಮ್ಮ.. ನಟಿ ಭಾವನಾ ಅಮ್ಮ ಅಗ್ತಾ ಇದ್ದಾರೆ! ಅರೇ ಇದು ಜಾಕಿ ಭಾವನಾ ಅವರ ಸುದ್ದಿನಾ...
Read moreDetails