ಸಿನಿಮಾ ಕೆಲಸಗಳಿಂದ ಕೊಂಚ ಬಿಡುವು ಮಾಡಿಕೊಂಡು ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಕಬಿನಿ ಫಾರೆಸ್ಟ್ನಲ್ಲಿ ಸಫಾರಿಗೆ ತೆರಳಿದ್ದಾರೆ. ಇವರ ಜತೆಗೆ ನುರಿತ ತಂಡವೂ ಕೂಡ ಇತ್ತು.



ಯಥಾಪ್ರಕಾರ ಕಾಡಿನ ಮಣ್ಣಿನ ಹಾದಿಯಲ್ಲಿ ಜೀಪ್ ಸಾಗುವಾಗ, ಆನೆಯೊಂದು ಜೀಪ್ ನೋಡುತ್ತಿದ್ದಂತೆ ಅಟ್ಟಿಸಿಕೊಂಡು ಬಂದಿದೆ. ಆನೆ ಅಟ್ಟಿಸಿಕೊಂಡು ಬರುತ್ತಿದ್ದಂತೆ, ಜೀಪ್ನಲ್ಲಿದ್ದವರೂ ಕೊಂಚ ಬೆದರಿದ್ದಾರೆ. ಅದೃಷ್ಟವಶಾತ್ ಯಾರಿಗೂ ಯಾವುದೇ ಅಪಾಯ ಸಂಭವಿಸಿಲ್ಲ..