ರಾಜ್ಯ ರಾಜಕಾರಣದಲ್ಲಿ ಮುಡಾ ಹಗರಣ (MUDA) ಮತ್ತು ವಾಲ್ಮೀಕಿ ನಿಗಮದ (Valmiki board scam) ಹಗರಣ ಸದ್ದು ಮಾಡ್ತಿದೆ. ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು, ಮುಜುಗರಕ್ಕೆ ಗುರಿ ಮಾಡಲು, ಸಿಎಂ ಸ್ಥಾನದಿಂದ ಸಿದ್ದುವನ್ನ ಕೆಳಗಿಳಿಸಲು ರಾಜ್ಯ ಬಿಜೆಪಿ ಹಾಗೂ ಜೆಡಿಎಸ್ ಒಟ್ಟಾಗಿ ಮೈಸೂರು ಚಲೋ ಪಾದಯಾತ್ರೆ ನಡೆಸುತ್ತಿದೆ.
ಇದೆಲ್ಲದರ ನಡುವೆ ಅಚ್ಚರಿ ಬೆಳವಣಿಗೆ ಅನ್ನುವಂತೆ ದೇವೇಗೌಡರು (Devegowda) ಧಿಡೀರ್ ದೆಹಲಿಗೆ (Delhi) ತೆರಳಿ ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು (Amit sha) ಭೇಟಿ ಮಾಡಿದ್ದಾರೆ. ಈಗಾಗಲೇ ಮೂಡ ಹಗರಣದ ವಿಚಾರವಾಗಿ ಪ್ರಾಸಿಕ್ಯೂಷನ್ ತನಿಖೆಗೆ ಅನುಮತಿ ನೀಡುವ ನಿರ್ಧಾರ ರಾಜ್ಯಪಾಲರ ಅಂಗಳದಲ್ಲಿದ್ದು, ಈ ಮಧ್ಯೆ ಗೌಡರ ಈ ಭೇಟಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಇದೀಗ ಈ ಭೇಟಿಯಿಂದ, ಈ ಪ್ರಾಸಿಕ್ಯೂಷನ್‌ಗೆ ಅನುಮತಿ ಸಿಗಬಹುದಾ ಎನ್ನುವ ಸಂಶಯಗಳು ಕೂಡ ಮೂಡುತ್ತಿವೆ. ಅಮಿತ್ ಶಾರನ್ನು ಭೇಟಿಯಾದ ಬೆನ್ನಲ್ಲಿಯೇ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾರನ್ನು (JP Nadda) ಕೂಡ ದೇವೇಗೌಡರು ಭೇಟಿಯಾಗಿದ್ದಾರೆ.