ರಾಜ್ಯ ರಾಜಕಾರಣದ ಬೆಳಣಿಗೆಯ ನಿಮಿತ್ತ ಹೈಕಮ್ಯಾಂಡ್‌ಗೆ (High command) ಮಾಹಿತಿ ನಿಡಲು ಇಂದು ದೆಹಲಿಗೆ (Delhi) ತೆರಳಿರುವ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ (dcm dk shivakumar) ಹೈಕಮಾಂಡ್ ನಾಯಕರನ್ನ ಭೇಟಿಯಾಗಿ ಸಧೀರ್ಘವಾದ ಚರ್ಚೆ ನಡೆಸಿದ್ದಾರೆ. ಮೂಡ ಪ್ರಕರಣದ ಬೆಳಣಿಗೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
ದೆಹಲಿಯ AICC ಪ್ರಧಾನ ಕಚೇರಿಗೆ ಆಗಮಿಸಿದ್ದ ಸಿಎಂ ಸಿದ್ದರಾಮಯ್ಯ (cm siddaramiah) ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಸಿಇಸಿ ಸಭೆಗೂ ಮುನ್ನ ರಾಹುಲ್ ಗಾಂಧಿ (rahul gandhi), ಮಲ್ಲಿಕಾರ್ಜುನ ಖರ್ಗೆ ಹಾಗೂ ಕೆ.ಸಿ ವೇಣುಗೋಪಾಲ್ ಜೊತೆ ಚರ್ಚೆ ನಡೆಸಿದ್ದಾರೆ. ರಾಜಕೀಯ ದಾಳ-ಪ್ರತಿದಾಳದ ಬಗ್ಗೆ ಸಮಾಲೋಚಿಸಿದ್ದಾರೆ.
ಇನ್ನು, ಈ ಸಭೆಯಲ್ಲಿ ಸಚಿವರಾದ ಪ್ರಿಯಾಂಕ್ ಖರ್ಗೆ, ಹೆಚ್.ಸಿ ಮಹದೇವಪ್ಪ, ಜಮೀರ್ ಅಹ್ಮದ್, ಪರಮೇಶ್ವರ್ ಹಾಗೂ ಕೆ.ಜೆ ಜಾರ್ಜ್ ಸೇರಿದಂತೆ ಹಲವರು ಭಾಗಿಯಾಗಿದ್ರು. ಸಭೆಯ ನಂತರ ಮಾತನಾಡಿದ ನಾಯಕರು, ಮೂಡ ಪ್ರಕರಣದಿಂದ ತಾವು ಯಾವುದೇ ರೀತಿ ವಿಚಲಿತರಾಗಿಲ್ಲ. ರಾಜಕೀಯವಾಗಿ ಮತ್ತು ಕಾನೂನಾತ್ಮಕವಾಗಿ ಈ ಆರೋಪವನ್ನ ಎದುರಿಸಲಿದ್ದೇವೆ ಎಂದು ರಣ್ ದೀಪ್ ಸರ್ಜೇವಾಲ (Randeep surjewala) ಹೇಳಿದ್ದಾರೆ.