ಸಿಎಂ ಸಿದ್ದರಾಮಯ್ಯ (Cm siddaramiah) ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಸಿಕ್ಕ ಬೆನ್ನಲೇ, ಈ ಪ್ರಕರಣದ ನೈತಿಕ ಹೊಣೆ ಹೊತ್ತು ಸಿಎಂ ರಾಜೀನಾಮೆ ನೀಡಬೇಕು ಎಂದು ಬಿಜೆಪಿ (Bjp) ನಾಯಕರು ಪ್ರಬಲವಾಗಿ ಆಗ್ರಹಿಸಿದ್ದಾರೆ. ಇಷ್ಟೇಲ್ಲಾ ಆರೋಪಗಳು ಕೇಳಿಬಂದರೂ, ಪ್ರಾಸಿಕ್ಯೂಷನ್ ಗೆ ಅನುಮತಿ ಸಿಕ್ಕರೂ ಸಿದ್ದರಾಮಯ್ಯ ಖುರ್ಚಿಗೆ ಅಂಟಿಕೊಮಡಿರುಉ ಸರಿಯಲ್ಲ ಎಂದು ಟೀಕಿಸಿದ್ದಾರೆ.

ಈ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆಯಾಗಬೇಕಾದ್ರೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ (Resignation) ನೀಡಿ ತನಿಖೆಗೆ ಸಹಕರಿಸಬೇಕು ಎಂದು ಬಿಜೆಪಿ ಟೀಂ ಸಿದ್ದು ಮೇಲೆ ಅಟ್ಯಾಕ್ ಮಾಡಿದೆ.ಈ ಹಿಂದೆ ಸಿಎಂ ರಾಜೀನಾಮೆಗೆ ಆಗ್ರಹಿಸಿ ಪಾದಯಾತ್ರೆ ನಡೆಸಿದ್ದ ವಿಪಕ್ಷಗಳಿಗೆ ಇದೀಗ ಈ ಬೆಳವಣಿಗೆ ಬ್ರಹ್ಮಾಸ್ತ್ರ ಸಿಕ್ಕಂತಾಗಿದೆ.
ಆದ್ರೆ ಮತ್ತೊಂದೆಡೆ, ಕಾಂಗ್ರೆಸ್ ಹೈಕಮ್ಯಾಂಡ್ (congress highcommand) ಬಲವಾಗಿ ಸಿದ್ದರಾಮಯ್ಯ ಬೆನ್ನಿಗೆ ನಿಂತಿದೆ. ಯಾವುದೇ ಕಾರಣಕ್ಕೂ ರಾಜೀನಾಮೆ ನೀಡಬೇಡಿ ಎಂಬ ಸಂದೇಶ ರವಾನೆ ಮಾಡಿದೆ ಎನ್ನಲಾಗಿದ್ದು, ರಾಜ್ಯದ ಸಂಪುಟದ ಸಚಿವರು ಕೂಡ ಸಿಎಂ ಪರವಾಗಿ ಸಮರ್ಥನೆಗೆ ಇಳಿದಿದ್ದಾರೆ. ಮುಂದೆ ಕಾನೂನಾತ್ಮಕವಾಗಿ ಹೋರಾಟ ಮುಂದುವರೆಯಲ್ಲಿದ್ದು ಏನೇಲ್ಲ ಬೆಳವಣಿಗೆಗಳು ಆಗುತ್ತೆ ಎಂಬುದನ್ನ ಕಾದುನೋಡಬೇಕಿದೆ.











