ಸಿಎಂ ಸಿದ್ದರಾಮಯ್ಯ (Cm siddaramiah) ವಿರುದ್ಧ ಪ್ರಾಸಿಕ್ಯೂಚನ್ ಗೆ ಅನುಮತಿ ನೀಡಿತ ಏಕಮಾತ್ರ ಕಾರಣಕ್ಕೆ ರಾಜ್ಯಪಾಲರ ವಿರುದ್ಧ ಬೆದರಿಕೆ ಹಾಕುತ್ತಿದ್ದಾರೆ ಎಂದು ಕಾಂಗ್ರೆಸ್ (Congress) ನಾಯಕರ ವಿರುದ್ಧ ಬಿಜೆಪಿಗರು (Bjp) ದೂರು ನೀಡಲು ಮುಂದಾಗಿದ್ದಾರೆ.
ರಾಜ್ಯದಲ್ಲಿ ಹಿಂದೆ ಎಂದೂ ಇಂಥ ಸನ್ನಿವೇಶ ಸೃಷ್ಟಿಯಾಗಿರಲಿಲ್ಲ. ರಾಜ್ಯಪಾಲರ ನಡೆ ಖಂಡಿಸಿ ಕಾಂಗ್ರೆಸ್ ನಾಯಕರು ಹೀನಾಯವಾಗಿ ನಡೆದುಕೊಳ್ಳುತ್ತಿದ್ದಾರೆ. ಥಾವರ್ ಚಂದ್ ಗೆಹಲೋಥ್ (thavar chand gehlot) ಓರ್ವ ದಲಿತ ಸಮುದಾಯದಿಂದ ಬಂದ ನಾಯಕರು, ಆದ್ರೆ ಅವರ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಿದೆ ಎಮದು ಬಿಜೆಪಿ ಕಿಡಿಕಾರಿದೆ.
ನೆರೆಯ ದೇಶ ಬಾಂಗ್ಲಾದೇಶಯಲ್ಲಿ (Bangladesh) ಆದಂತೆ, ಅದೇ ಮಾದರಿಯ ಇಲ್ಲಿಯೂ ರಾಜಭವನದ ಮೇಲೆ ದಾಳಿ ಮಾಡುವುದಾಗಿ ಕಾಂಗ್ರೆಸ್ ನಾಯಕರು ಬೆದರಿಕೆ ಹಾಕಿದ್ದಾರೆ ಎಂದು ಬಿಜೆಪಿಯವರು ಆರೋಪಿಸಿ ಛಲವಾದಿ ನಾರಾಯಣಸ್ವಾಮಿ ನೇತೃತ್ವದಲ್ಲಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ದೂರು ನೀಡಲು ಮುಂದಾಗಿದ್ದಾರೆ.