ರಾಜಧಾನಿ ಬೆಂಗಳೂರು (Bangalore) ಬೆಚ್ಚಿ ಬೀಳುವ ಮತ್ತೊಂದು ನಿಗೂಢ ಸ್ಫೋಟ ಪ್ರಕರಣ ಜೆಪಿ ನಗರದ (JP nagar) 24ನೇ ಮುಖ್ಯರಸ್ತೆಯ ಕಟ್ಟಡ ಒಂದರ ಕೋಣೆಯಲ್ಲಿ ಸಂಭವಿಸಿದೆ. ಆಗಸ್ಟ್ 13ರ ಮಂಗಳವಾರ ಈ ಘಟನೆ ನಡೆದಿದ್ದು ಕೊಂಚ ತಡವಾಗಿ ಬೆಳಕಿಗೆ ಬಂದಿದೆ.
ಈ ಸ್ಪೋಟಕ್ಕೆ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಸದ್ಯ ಸ್ಥಳಕ್ಕೆ ಎನ್ಐಎ ತಂಡ (NIA team) ಭೇಟಿ ನೀಡಿದ್ದು ಸ್ಥಳ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಸ್ಫೋಟದ ತೀವ್ರತೆಗೆ ಕೊಠಡಿಯಲ್ಲಿದ್ದ ವಸ್ತುಗಳೆಲ್ಲ ಸಂಪೂರ್ಣ ಚೆಲ್ಲಾಪಿಲ್ಲಿ ಯಾಗಿದ್ದು ಇಬ್ಬರಿಗೆ ಗಂಭೀರ ಗಾಯಗಳಾಗಿದೆ.
ಈ ಕೊಠಡಿಯಲ್ಲಿ ವಾಸವಿದ್ದವರು ಉತ್ತರಪ್ರದೇಶ (Uttar pardesh) ಮೂಲದ ಸಮೀರ್ (Sameer) ಮತ್ತು ಮೊಸಿನ್ (Mosin) ಎಂದು ಗುರುತಿಸಲಾಗಿದ್ದು, ಈ ಇಬ್ಬರಿಗೂ ಗಾಯಗಳಾಗಿದ್ದು ಚಿಕಿತ್ಸೆಗೆ ಒಳಪಡಿಸಲಾಗಿದೆ. ಈ ಸ್ಪೋಟದ ಹಿನ್ನೆಲೆ ನಿಗೂಢವಾಗಿದ್ದು ಸಿಲಿಂಡರ್ ಸ್ಪೋಟಗೊಂಡಿದ್ದ ಅಥವಾ ಬಾಂಬ್ ಮಾದರಿಯ ವಸ್ತು ಸ್ಪೋಟಗೊಂಡಿದೆ ಎಂಬುದರ ಬಗ್ಗೆ ಸ್ಪಷ್ಟತೆ ಸಿಗಬೇಕಿದೆ.
ಈ ಹಿಂದೆ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ (Rameshwaram cafe) ಸ್ಪೋಟ ಸಂಭವಿಸಿ ಬೆಂಗಳೂರಿಗರು ಭಯಪಡುವಂತಾಗಿತ್ತು. ಇದೀಗ ಸ್ವಾತಂತ್ರ್ಯ ದಿನಾಚರಣೆ ಸನಿಹದಲ್ಲೇ ಬೆಂಗಳೂರಲ್ಲಿ ಮತ್ತೊಂದು ನಿಗೂಢ ಸ್ಪೋಟ ಸಂಭವಿಸಿರುವುದು ನಾನಾ ಅನುಮಾನಗಳಿಗೆ ಕಾರಣವಾಗಿದೆ.