ಇಂದು 78ನೇ ಸ್ವಾತಂತ್ರ ದಿನಾಚರಣೆಯ ಅಂಗವಾಗಿ ರಾಜ್ಯಸರ್ಕಾರದ ವತಿಯಿಂದ ಬೆಂಗಳೂರಿನ (Bangalore) ಮಾಣಿಕ್ ಷಾ ಮೈದಾನದಲ್ಲಿ (Manik sha ground) ಸ್ವಾತಂತ್ರ್ಯ ದಿನಾಚರಣೆಯನ್ನ (independence day) ಆಚರಿಸಲಾಯ್ತು. ಈ ಸಂದರ್ಭದಲ್ಲಿ ಧ್ವಜಾರೋಹಣ ನೆರವೇರಿಸಿದ ನಂತರ ರಾಜ್ಯದ ಜನರನ್ನ ಉದ್ದೇಶಿಸಿ ಮಾತನಾಡಿದ್ರ. ಸಿಎಂ ಸಿದ್ದು (Cm siddaramiah) ಇವತ್ತಿನ ಭಾಷಣದ ಉದ್ದಕ್ಕೂ ಗ್ಯಾರೆಂಟಿಗಳ ವಿಚಾರವನ್ನೇ ಪದೇ ಪದೇ ಪ್ರಸ್ತಾಪಿಸಿದ್ದು ಕುತೂಹಲಕ್ಕೆ ಕಾರಣವಾಗಿತ್ತು.
ರಾಜ್ಯದಲ್ಲಿ ಗ್ಯಾರಂಟಿಗಳನ್ನ (Gaureenty) ಹಿಂಪಡೆಯಲಾಗುತ್ತದೆ ಅಥವಾ ಹಿಂಪಡೆಯಬೇಕು ಎಂಬ ಚರ್ಚೆ ವ್ಯಾಪಕವಾಗಿ ಕಾಂಗ್ರೆಸ್ (Congress) ಪಾಳಯದಲ್ಲೇ ಕೇಳಿ ಬಂದಿತ್ತು. ಇದೇ ರೀತಿ ಗ್ಯಾರೆಂಟಿಗಳಿಗೆ ಹಣ ಮೀಸಲಿಟ್ಟರೆ, ಅಭಿವೃದ್ಧಿ ಕೆಲಸಗಳಿಗೆ ಅನುದಾನ ಕೊರತೆಯಾಗುತ್ತದೆ. ಹೀಗಾಗಿ ಗ್ಯಾರೆಂಟಿಗಳಿಗೆ ಬ್ರೇಕ್ ಹಾಕಬೇಕು ಎಂಬ ಚರ್ಚೆ ಗರಿಗೆದರಿತ್ತು.
ಹೀಗಾಗಿ, ಮುಖ್ಯಮಂತ್ರಿಗಳು ತಮ್ಮ ಇಂದಿನ ಭಾಷಣದಲ್ಲಿ, ಯಾವುದೇ ಕಾರಣಕ್ಕೂ ಗ್ಯಾರೆಂಟಿಗಳನ್ನ ನಿಲ್ಲಿಸುವುದಿಲ್ಲ, ಎಲ್ಲಾ ಗ್ಯಾರೆಮಟಿಗಳನ್ನು ಹಾಗೇ ಮುಂದುವರೆಸುತ್ತೇವೆ. ನಮ್ಮ ಸರ್ಕಾರದ ಈ ಗ್ಯಾರೆಂಟಿ ಯೋಜನೆಗಳಿಂದ ರಾಜ್ಯದ ಬಡಜನರಿಗೆ ಬಹಳ ಉಪಯೋಗವಾಗಿದೆ ಎಂದು ಪದೇ ಪದೇ ಹೇಳುವ ಮೂಲಕ, ಪರೋಕ್ಷವಾಗಿ ಗ್ಯಾರೆಮಟಿ ಯೋಜನೆಗಳನ್ನ ನಿಲ್ಲಿಸುವುದಿಲ್ಲ ಎಂದು ಹೇಳಿದ್ದಾರೆ.