ಸಿಎಂ ಸಿದ್ದರಾಮಯ್ಯ (Cm siddaramiah) ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಅಂತಾ ದಾವಣಗೆರೆಯಲ್ಲಿ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ (MP renukacharya) ಆಗ್ರಹಿಸಿದ್ದಾರೆ. ಮಾನ್ಯ ರಾಜ್ಯಪಾಲರು ಕಾನೂನು ತಜ್ಞರೊಂದಿಗೆ ಚರ್ಚಿಸಿಯೇ ನಿರ್ಧಾರ ಮಾಡಿದ್ದಾರೆ, ಇದೇನು ಕಾನೂನು ಬಾಹಿರವಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.
ಈ ಹಿಂದೆ ಬಿಎಸ್ ವೈ (BSY) ಮೇಲೆ ಇಬ್ಬರು ವ್ಯಕ್ತಿಗಳು ಖಾಸಗಿ ದೂರು ನೀಡಿದ್ರು. ಅಂದು ಹಂಸರಾಜ್ ಭಾರಧ್ವಾಜ್ (Hamsaraj bharadwaj) ಪ್ರಾಸಿಕ್ಯೂಷನ್ ಗೆ ಅನುಮತಿ ಕೊಟ್ಟಿದ್ದರು.ಆ ಸಂದರ್ಭದಲ್ಲಿ ನೈತಿಕ ಹೊಣೆ ಹೊತ್ತು ಬಿಎಸ್ ವೈ ರಾಜೀನಾಮೆ ನೀಡಿದ್ದರು.ಆಗ ರಾಜಭವನ ಪರಿಶುದ್ಧವಾಗಿತ್ತಾ? ಅಂತಾ ಪ್ರಶ್ನಿಸಿದ್ದಾರೆ.
ರಾಜಭವನ, ಸಿಬಿಐ (CBI) ದುರುಪಯೋಗಪಡಿಸಿಕೊಂಡಿದ್ದು ಕಾಂಗ್ರೆಸ್. ಅಲ್ಲದೇ ಒಂದುವರೆ ಸಾವಿರಕ್ಕೂ ಹೆಚ್ಚು ಬೆಂಬಲಿಗರಿಗೆ ನಿವೇಶನ ಕೊಡಿಸಿದ್ದಾರೆ. ಆರೋಪ ಮುಕ್ತರಾದರೆ ಮತ್ತೆ ಸಿಎಂ ಸ್ಥಾನ ಏರಬಹದು, ಈಗ ರಾಜೀನಾಮೆ ನೀಡಿ ಎಂದು ಒತ್ತಾಯಿಸಿದ್ದು.