- ಕೃಷ್ಣಮಣಿ
ಮಹಿಳೆ ಅಪಹರಣ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಜೆಡಿಎಸ್ ಶಾಸಕ ಎಚ್.ಡಿ ರೇವಣ್ಣಗೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಕೊನೆಗೂ ಜಾಮೀನು ನೀಡಿದೆ. ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಲ್ಲಿ ಪ್ರಕರಣದ ಕುರಿತು ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶರು ಜಾಮೀನು ಮಂಜೂರು ಮಾಡಿದ್ದಾರೆ.

ಜಾಮೀನಿಗೆ ಇಬ್ಬರ ಶ್ಯೂರಿಟಿ, 5 ಲಕ್ಷ ರೂಪಾಯಿ ಬಾಂಡ್, ಸಾಕ್ಷಿ ನಾಶಕ್ಕೆ ಮುಂದಾಗಬಾರದು. ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿಗೆ ಹೋಗಬಾರದು, ಸಂತ್ರಸ್ತೆಯರಿಗೆ ಬೆದರಿಕೆ ಹಾಕಬಾರದು, ಎಸ್ಐಟಿ ತನಿಖೆಗೆ ಸಹಕರಿಸಬೇಕು ಅನ್ನೋ ಷರತ್ತುಗಳನ್ನು ಹಾಕಲಾಗಿದೆ.

ಹೆಚ್.ಡಿ. ರೇವಣ್ಣಗೆ ಜಾಮೀನು ಸಿಕ್ಕರೂ ಇಂದು ಬಿಡುಗಡೆ ಭಾಗ್ಯವಿಲ್ಲ. ಕೋರ್ಟ್ ತೀರ್ಪಿನ ವೇಳೆಗೆ ಜೈಲಿನ ಸಮಯ ಮೀರಿದ್ರಿಂದ ನಾಳೆ ಬಿಡುಗಡೆ ಪ್ರಕ್ರಿಯೆ ನಡೆಯಲಿದೆ. ರೇವಣ್ಣಗೆ ಜಾಮೀನು ಸಿಗುತ್ತಿದ್ದಂತೆ ಹಾಸನದ ಹೊಳೆನರಸೀಪುರದಲ್ಲಿ ಸಂಭ್ರಮ ಮನೆ ಮಾಡಿದೆ. ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.

ಸಂಸದ ಪ್ರಜ್ವಲ್ ರೇವಣ್ಣ ಪೆನ್ಡ್ರೈವ್ ಪ್ರಕರಣದಲ್ಲಿ ಕೆ.ಆರ್.ನಗರ ಸಂತ್ರಸ್ತೆ ಕಿಡ್ನ್ಯಾಪ್ ಆಗಿದ್ದರು ಅನ್ನೋ ಮಹಿಳೆ ನನ್ನನ್ನು ಯಾರೂ ಕಿಡ್ನ್ಯಾಪ್ ಮಾಡಿಲ್ಲ. ರೇವಣ್ಣ ಕುಟುಂಬಸ್ಥರು ಯಾರೂ ನನಗೆ ತೊಂದ್ರೆ ಕೊಟ್ಟಿಲ್ಲ.. ನಾನು ಸಂಬಂಧಿಕರ ಮನೆಗೆ ಹೋಗಿದ್ದೇ ಅಂತ ಸಂತ್ರಸ್ತ ಮಹಿಳೆ ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದು ಜಾಮೀನು ಪಡೆಯಲು ಅನುಕೂಲ ಆಗಿದೆ ಎನ್ನಬಹುದು.

ಸಂತ್ರಸ್ತೆ ತೋಟದ ಮನೆಯಲ್ಲಿ ಇರಲಿಲ್ಲ. ಮೇ 4ರಂದು ನಮ್ಮ ಮನೆಗೆ ಬಂದಿದ್ದರು. ಎಸ್ಐಟಿ ಅಧಿಕಾರಿಗಳು ಬಂದು ನಮ್ಮ ಮನೆಯಿಂದ ಕರೆದುಕೊಂಡು ಹೋದ್ರೂ ಅಂತ ಸಂಬಂಧಿಯೊಬ್ಬರು ಹೇಳಿದ್ದಾರೆ. ಹಾಗಿದ್ದ ಮೇಲೆ ತೋಟದ ಮನೆಯಿಂದ ರಕ್ಷಣೆ ಮಾಡಿದೆವು ಎಂದು ಎಸ್ಐಟಿ ಸುಳ್ಳು ಹೇಳಿದೆ ಎನ್ನುವುದು ಸಾಬೀತಾದಂತಾಗಿದೆ.





