ಬೆಂಗಳೂರಿನಲ್ಲಿ ನ್ಯೂಇಯರ್ ಸಂಭ್ರಮಕ್ಕೆ ಕೌಂಟ್ಡೌನ್ ಶುರುವಾಗಿದೆ. 2025ರ ಸ್ವಾಗತಕ್ಕೆ ಬೆಂಗಳೂರು ಸಜ್ಜಾಗಿದ್ದು, ಎಂ.ಜಿ ರೋಡ್, ಬ್ರಿಗೇಡ್ ರೋಡ್ಗಳು ಝಗಮಗಿಸುತ್ತಿವೆ. ಸಂಭ್ರಮಾಚರಣೆ ವೇಳೆ ಯಾವುದೇ ಅಹಿತರಕ ಘಟನೆ ನಡೆಯದಂತೆ ಪೊಲೀಸ್ರು ಮುಂಜಾಗೃತ ಕ್ರಮಕೈಗೊಂಡಿದ್ದಾರೆ. ಬ್ರಿಗೇಡ್ ರಸ್ತೆಯುದ್ಧಕ್ಕೂ ಬ್ಯಾರಿಕೇಟ್ ಅಳವಡಿಸಲಾಗಿದ್ದು, ಸಿಸಿಟಿವಿ ಅಳವಡಿಕೆ ಮಾಡಲಾಗಿದೆ. ಕಮಾಂಡ್ ಸೆಂಟರ್ ರೀತಿಯಲ್ಲಿ ಮೊಬೈಲ್ ವ್ಯಾನ್ ಸಂಚಾರ ಇರಲಿದ್ದು, ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.
ನ್ಯೂ ಇಯರ್ ಸ್ವಾಗತಕ್ಕೆ ಹಾಟ್ ಸ್ಪಾಟ್ ಆಗಿರುವ ಬ್ರಿಗೇಡ್ ರಸ್ತೆ, ಎಂಜಿ ರಸ್ತೆ, ಚರ್ಚ್ ಸ್ಟ್ರೀಟ್, ರೆಸಿಡೆನ್ಸಿ ರಸ್ತೆಯಲ್ಲಿ ಸುಮಾರು 650ಕ್ಕೂ ಹೆಚ್ಚು ಸಿಸಿ ಕ್ಯಾಮೆರಾಗಳ ಅಳವಡಿಕೆ ಮಾಡಲಾಗಿದೆ. ಎಲ್ಲಾ ಕ್ಯಾಮೆರಾ ದೃಶ್ಯಾವಳಿ ಮಾನಿಟರ್ ಮಾಡಲು ಬ್ರಿಗೇಡ್ ರಸ್ತೆಯ ಹೋಟೆಲ್ನಲ್ಲಿ ಕಂಟ್ರೋಲ್ ರೂಂ ನಿರ್ಮಾಣ ಮಾಡಲಾಗಿದೆ. ಹೊಸ ವರ್ಷಾಚರಣೆಗೆ ಹುಬ್ಬಳ್ಳಿಯಲ್ಲೂ ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ನಗರದಾದ್ಯಂತ 2 ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಭದ್ರತೆಗೆ ನಿಯೋಜನೆ ಮಾಡಲಾಗಿದೆ. ರಾತ್ರಿ 10 ಗಂಟೆಯವರೆಗೂ ಮಾತ್ರ ಡಿಜೆ ಅವಕಾಶ ಮಾಡಿಕೊಡಲಾಗಿದೆ.
ಬೆಳಗಾವಿಯಲ್ಲಿ ಹೊಸ ವರ್ಷ ಬರಮಾಡಿಕೊಳ್ಳಲು ವಿಶೇಷ ರೀತಿಯಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಓಲ್ಡ್ ಮ್ಯಾನ್ ಪ್ರತಿಕೃತಿ ದಹಿಸುವ ವಿಶೇಷ ಸಂಪ್ರದಾಯ ಬೆಳಗಾವಿಯಲ್ಲಿದೆ. ಕಹಿ ನೆನಪುಗಳು ಸುಟ್ಟು, ಸಿಹಿ ನೆನಪಿನೊಂದಿಗೆ ಹೊಸ ವರ್ಷ ಆಚರಣೆ ಮಾಡಲಾಗ್ತಿದೆ. ಇನ್ನು ಬೆಳಗಾವಿಯ ಕ್ಯಾಂಪ್ ಪ್ರದೇಶದಲ್ಲಿ ಓಲ್ಡ್ ಮ್ಯಾನ್ ಬೊಂಬೆಗಳು ಸಿದ್ಧಗೊಂಡಿವೆ. ಸದ್ಯ ಬೆಳಗಾವಿಯಲ್ಲಿ ಯಾವುದೇ ಆಹಿತಕರ ಘಟನೆ ನಡೆಯದಂತೆ 2 ಸಾವಿರಕ್ಕೂ ಅಧಿಕ ಪೊಲೀಸರನ್ನ ನಿಯೋಜನೆ ಮಾಡಲಾಗಿದೆ.
ಹಾಸನದಲ್ಲೂ ನ್ಯೂ ಇಯರ್ ಸೆಲೆಬ್ರೇಷನ್ಗೆ ಸಿದ್ಧತೆ ನಡೀತಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ಜಿಲ್ಲಾ ಪೊಲೀಸ್ ವರಿಷ್ಟಾಧೀಕಾರಿ ಮಹಮದ್ ಸುಜಿತಾ, ಜಿಲ್ಲೆಯಾದ್ಯಂತ 500ಕ್ಕೂ ಹೆಚ್ಚು ಪೊಲೀಸರು, KSRP, DAR, ತುಕಡಿ ನಿಯೋಜಿಸಲಾಗಿದೆ. ಆಚರಣೆ ವೇಳೆ ಜಾಲಿ ರೈಡ್ ಕಂಟ್ರೋಲ್ ಮಾಡಲು ಕೆಲವೊಂದು ಕಡೆ ಬ್ಯಾರಿಕೇಡ್ ಹಾಕಲಾಗಿದೆ ಎಂದಿದ್ದಾರೆ.
ಹೊಸ ವರ್ಷಾಚರಣೆ ಹಿನ್ನೆಲೆ, ಚಿಕ್ಕಮಗಳೂರಿನ ಮುಳ್ಳಯ್ಯನಗಿರಿಗೆ ಪ್ರವಾಸಿಗರ ದಂಡು ಹರಿದು ಬರುತ್ತಿದೆ. ಈ ನಡುವೆಯೇ ಅಪಾಯಕಾರಿ ಸ್ಥಳದಲ್ಲಿ ನಿಂತು ಪ್ರವಾಸಿಗರು ಸೆಲ್ಪಿ ತೆಗೆದುಕೊಳ್ತಿದ್ದು, ಪ್ರಾಣದ ಜೊತೆ ಚೆಲ್ಲಾಟವಾಡ್ತಿದ್ದಾರೆ. ಬಂಡೆಯ ತುತ್ತ ತುದಿಯಲ್ಲಿ ಸೆಲ್ಪಿ ತೆಗೆದುಕೊಳ್ಳಲು ಕಲ್ಲಿನ ಬಂಡೆ ಏರುತ್ತಿದ್ದಾರೆ. ಸ್ವಲ್ಪ ಯಾಮಾರಿದ್ರು ಪ್ರಪಾತಕ್ಕೆ ಬೀಳುವ ಸಾಧ್ಯತೆ ಇದ್ರು. ಹೆದರದೇ ಹುಚ್ಚಾಟ ಮೆರೆದಿದ್ದಾರೆ.
ಹೊಸ ವರ್ಷಾಚರಣೆ ಹಿನ್ನೆಲೆ, ಉಡುಪಿ ಜಿಲ್ಲೆಯ ಮಲ್ಪೆ ಕಡಲ ತೀರಕ್ಕೆ ಸಾಗರೋಪಾದಿಯಲ್ಲಿ ಪ್ರವಾಸಿಗರು ಆಗಮಿಸ್ತಿದ್ದಾರೆ. ಕಳೆದ ಒಂದು ವಾರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರ್ತಿದ್ದು, ಮಲ್ಪೆಯಲ್ಲಿ ಆಟವಾಡುತ್ತಾ ಎಂಜಾಯ್ ಮಾಡಿದ್ದಾರೆ. ಬೋಟಿಂಗ್, ಪ್ಯಾರಾಚೂಟ್ನಂತಹ ಅಡ್ವೇಂಚರಸ್ಗಳನ್ನ ಮಾಡುವ ಮೂಲಕ ಎಂಜಾಯ್ ಮಾಡ್ತಿದ್ದಾರೆ.
ಮಂಗಳೂರಲ್ಲಿ ನ್ಯೂಇಯರ್ಗೆ ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಒಟ್ಟು 49 ಕಡೆ ಪಾರ್ಟಿ ಆಯೋಜನೆ ಮಾಡಲಾಗಿದೆ. ಇನ್ನು ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದ್ದು, ಒಟ್ಟು 30 ತಂಡಗಳನ್ನ ರಚನೆ ಮಾಡಲಾಗಿದೆ. ಇಂದು ಮಧ್ಯಾಹ್ನದಿಂದಲೇ ನಗರದಲ್ಲಿ ಖಾಕಿ ಗಸ್ತು ತಿರುಗುತ್ತಿದ್ದು. ಇನ್ನು ಒಟ್ಟು 19 ಕಡೆ ಬ್ಯಾರಿಕೇಡ್ ಹಾಕಿ ತಪಾಸಣೆ ಮಾಡಲಾಗುತ್ತದೆ ಅಂತ ಕಮಿಷನರ್ ಮಾಹಿತಿ ನೀಡಿದ್ದಾರೆ. ಮಂಗಳೂರಿನ ಬೀಚ್ಗಳಲ್ಲಿ ಬೆಳಗ್ಗೆಯಿಂದಲೇ ಪ್ರವಾಸಿಗರು ಮೋಜು ಮಸ್ತಿಯಲ್ಲಿ ತೊಡಗಿದ್ದಾರೆ. ಪಣಂಬೂರು ಬೀಚ್ನಲ್ಲಿ ಪ್ರವಾಸಿಗರ ದಂಡು ಸೇರಿದ್ದು ಮಕ್ಕಳು, ಹಿರಿಯರು ಎನ್ನದೇ ಬೀಚ್ನಲ್ಲಿ ಮಸ್ತಿ ಮಾಡ್ತಿದ್ದಾರೆ.