ಹೆಚ್.ಡಿ ಕೋಟೆಯಲ್ಲಿ ಸರ್ಕಾರದ ವತಿಯಿಂದ ವಾಲ್ಮೀಕಿ ಜಯಂತಿ ಆಚರಣೆಯಲ್ಲಿ ಭಾಗಿಯಾಗಿದ್ದ ಸಿಎಂ ಸಿದ್ದರಾಮುಯ್ಯ, ವಾಲ್ಮೀಕಿ ಹಾಗು ವಿದ್ಯೆ ಬಗ್ಗೆ ಮಹತ್ವದ ಮಾತನ್ನಾಡಿದ್ದಾರೆ.

24 ಸಾವಿರ ಶ್ಲೋಕವಿರುವ ಸಂಸ್ಕೃತದಲ್ಲಿ ರಚನೆ ಮಾಡಿರುವ ರಾಮಾಯಣ ವಾಲ್ಮೀಕಿ ಅವರ ದೊಡ್ಡ ಕೊಡುಗೆ. ಅವತ್ತು ಶೂದ್ರರು ವಿದ್ಯೆ ಕಲಿಯಲು ಅವಕಾಶ ಇರಲಿಲ್ಲ. ಅಂತಹ ಕಾಲದಲ್ಲಿ ಸಂಸ್ಕೃತ ಕಲಿತು ರಾಮಾಯಣ ರಚನೆ ಮಾಡಿದ್ದು ಸಣ್ಣ ಕೆಲಸ ಅಲ್ಲ. ಅದೊಂದು ಮಹಾನ್ ಸಾಧನೆ. ರಾಮಾಯಣ ಬರೆದಿದ್ದು ವಾಲ್ಮೀಕಿ, ಮಹಾಭಾರತ ಬರೆದಿದ್ದು ವ್ಯಾಸ. ಎಲ್ಲರೂ ಕೂಡ ಮೇಲ್ಜಾತಿಗೆ ಸೇರಿದವರಲ್ಲ. ವಿದ್ಯೆ ಯಾರಪ್ಪನ ಸ್ವತ್ತಲ್ಲ ಎಂದು ವಾಲ್ಮೀಕಿ ಹಾಗು ವ್ಯಾಸ ಅವರನ್ನು ಹಾಡಿ ಹೊಗಳಿದ್ದಾರೆ ಸಿಎಂ ಸಿದ್ದರಾಮಯ್ಯ.
ನಿಮ್ಮ ಜೀವನದ ಶಿಲ್ಪಿ ನೀವೇ. ಇದನ್ನು ವಾಲ್ಮೀಕಿ ಮಹರ್ಷಿ ಹೇಳಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ವಿದ್ಯೆಯನ್ನು ಎಲ್ಲರೂ ಕಲಿಬೇಕು. ವಿದ್ಯೆ ಕಲಿದೆ ಹೋಗಿದ್ರೆ, ರಾಮಾಯಣ ಬರೆಯದೇ ಹೋಗಿದ್ರೆ ವಾಲ್ಮೀಕಿ ಜಯಂತಿ ಮಾಡ್ತಿದ್ವಾ..? ಕನಕದಾಸರು ಶೂದ್ರ ವರ್ಗದವರೂ ದಾಸರಾದರು. ವಿದ್ಯಾವಂತರಾಗಲು ಜಾತಿ ಅಡ್ಡ ಬರಲ್ಲ. ನಾನು ಲಾಯರ್ ಆಗಬೇಕಿತ್ತು. ಮೆಡಿಕಲ್ ಸೀಟು ಸಿಕ್ಕಿರಲಿಲ್ಲ. ಆ ಸಮಯದಲ್ಲಿ ಒಂದು ವರ್ಷ ಓದಲಿಲ್ಲ ಎಂದಿದ್ದಾರೆ.

ನಾನು ಮತ್ತೆ ಓದಬೇಕು ಅಂತಿದ್ದೆ. ನಮ್ಮ ಅಪ್ಪನ ಬಳಿ ಓದಬೇಕು ಅಂತ ಕೇಳಿದೆ. ನಮ್ಮ ತಂದೆ ಚನ್ನಪ್ಪನ ಕೇಳ್ಕೊ ಬರ್ತೀನಿ ಅಂದ್ರು. ಆ ಚನ್ನಪ್ಪಯ್ಯ ಕುರುಬ್ರು ಲಾಯರ್ ಆಗಲ್ಲ. ಅದೆಲ್ಲ ಮೇಲ್ಜಾತಿ ಅವ್ರು ಆಗೋದು ಅಂದ್ರು. ನಾನು ಊರಿನ ಜನರನ್ನು ಸೇರಿಸಿ ನನ್ನ ಭಾಗ ಕೊಡಿಸಿ, ಓದ್ತಿನಿ ಅಂತ ಹಠ ಮಾಡಿದ್ದೆ. ಹಳೇ ನೆನಪುಗಳನ್ನು ಮೆಲುಕು ಹಾಕಿದ ಸಿಎಂ ಸಿದ್ದರಾಮಯ್ಯ, ಒಂದು ವೇಳೆ ಅಂದು ನಾನು ಓದದೇ ಇದ್ರೆ ಸಿಎಂ ಆಗೋಕೆ ಆಗ್ತೀತಾ..? ಎನ್ನುವ ಮೂಲಕ ಕಾರ್ಯಕ್ರಮದಲ್ಲಿ ತಮ್ಮ ಓದಿನ ಜೀವನ ನೆನಪಿಸಿಕೊಂಡಿದ್ದಾರೆ ಸಿದ್ದರಾಮಯ್ಯ.