ಬೆಂಗಳೂರು: ಮನೆಗೆಲಸಕದಕಿದ್ದ ವ್ಯಕ್ತಿ ಮನೆಯಲ್ಲಿದ್ದ 65 ವರ್ಷದ ಮಹಿಳೆಯನ್ನ ಕೊಲೆ ಮಾಡಿ ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಕೋ ಲೇಔಟ್ ನಲ್ಲಿ ನಡೆದಿದೆ.

ಇಂದು ಮಧ್ಯರಾತ್ರಿ ಮನೆಗೆಲಸ ಮಾಡ್ತಿದ್ದ ದೇವರಾಜು(50) ಎಂಬಾತ ಮನೆಯಲ್ಲಿದ್ದ ಸರಿತಾ ಎಂಬ ಮಹಿಳೆಯನ್ನ ಕೊಲೆ ಮಾಡಿ, ರೂಮಿನಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಬೆಳಗಿನ ಜಾವ 4.30 ಸುಮಾರಿಗೆ ದುಬೈಗೆ ತೆರಳಿದ್ದ
ಮಹಿಳೆ ಪತಿ ಮನೆಗೆ ಬಂದಿದ್ದಾರೆ. ಈ ವೇಳೆ
ಮೊದಲ ಮಹಡಿಯಲ್ಲಿದ್ದ 27 ವರ್ಷದ ಮಗಳು ಬಾಗಿಲು ತೆರೆದು ತನ್ನ ರೂಮ್ ಗೆ ಹೋಗಿದ್ದಳು.
ನಂತರ ಪತ್ನಿ ಸರಿತಾ ಇದ್ದ ರೂಂ ಗೆ ಪತಿ ಹೋದಾಗ ವಿಚಾರ ಗೊತ್ತಾಗಿದೆ.
ಮಹಿಳೆ ಕೊಲೆ ಕೃತ್ಯ ನಡೆದಾಗ ಮಹಿಳೆಯ ಮಗಳು ಕೂಡ ಮನೆಯಲ್ಲಿಯೇ ಇದ್ದರೂ ಆಕೆಗೆ ವಿಚಾರ ಗೊತ್ತಾಗಿಲ್ಲ. ವಿಚಾರ ತಿಳಿದು ಮೈಕೋ ಲೇಔಟ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.











