ಬೆಳಗಿನ ತಿಂಡಿ ಅಥವಾ ಮಧ್ಯಾಹ್ನದ ಊಟ ಆಗಿರಬಹುದು, ರಾತ್ರಿಯಾ ಊಟ ಇದರ ಜೊತೆಗೆ ಕಾಫಿ-ಟೀ ಹಾಗೂ ಚಾಟ್ಸ್ ಆದ್ರೆ ಮಸಾಲಾಪುರಿ ಪಾನಿಪುರಿ, ಗೋಬಿ ಏನೇ ತಿನ್ನೋದಾದ್ರೂ ಬಿಸಿಬಿಸಿಯಾಗಿ ತಿಂದರೆ ಮಾತ್ರ ಚೆನ್ನಾಗಿರುತ್ತೆ ಅನ್ನೋದು ಜನರ ಮಾತು. ಹಾಗಾಗಿ ಸಾಕಷ್ಟು ಜನ ಬಿಸಿ ಪದಾರ್ಥವನ್ನು ತಿನ್ನೋದಕ್ಕೆ ಇಷ್ಟಪಡ್ತಾರೆ. ಆದ್ರೆ ಕೆಲವೊಂದು ಸಲ ಬಿಸಿ ಆಹಾರವನ್ನು ತಿನ್ನುವ ಆತುರದಲ್ಲಿ ನಾಲಿಗೆ ಸುಟ್ಟು ಹೋಗುತ್ತದೆ.
ನಾಲಿಗೆಯ ಮೇಲಿನ ಚರ್ಮ ಸುಟ್ಟು ಉರಿಯೋದಿಕ್ಕೆ ಶುರುವಾಗುತ್ತದೇ. ಇದರಿಂದ ಮೂರ್ನಾಲ್ಕು ದಿನ ನಮಗೆ ಏನನ್ನು ಸರಿಯಾಗಿ ತಿನ್ನೋದಿಕ್ಕೆ ಆಗಲ್ಲ ಜೊತೆಗೆ ಟೇಸ್ಟ್ ಕೂಡ ಅಷ್ಟೊಂದು ಸರಿಯಾಗಿ ಗೊತ್ತಾಗಲ್ಲ, ಅದರಲ್ಲಿ ಕಾರ, ಬಿಸಿ ಆಹಾರ ಆಗಿರ್ಬೋದು ಮತ್ತೆ ಹುಳಿ ಪದಾರ್ಥ ಯಾವುದನ್ನು ಕೂಡ ಸರಿಯಾಗಿ ಸೇವಿಸೋಕೆ ಆಗೋದಿಲ್ಲ.
ಇಂತಹ ಸಂದರ್ಭದಲ್ಲಿ ಟೆನ್ಶನ್ ಮಾಡ್ಕೋಬೇಡ..ಕೆಲವು ಮನೆ ಮದ್ದುಗಳನ್ನ ಅನುಸರಿಸಿದ್ರೆ ಬೇಗನೆ ನೋವು ಹಾಗೂ ಉರಿ ನಿವಾರಣೆ ಆಗುತ್ತದೆ..ಹಾಗಿದ್ರೆ ನಾಲಿಗೆ ಸುಟ್ಟಾಗ ತಪ್ಪದೆ ಈ ರೆಮೆಡಿ ನ ಟ್ರೈ ಮಾಡಿ
ಜೇನುತುಪ್ಪ
ನಾಲಿಗೆ ಸುಟ್ಟ ಸಂದರ್ಭದಲ್ಲಿ ನಾಲಿಗೆಯ ಮೇಲೆ ಜೇನುತುಪ್ಪವನ್ನು ಲೇಪನ ಮಾಡಿದರೆ ಒಳ್ಳೆಯದು. ಜೇನುತುಪ್ಪದಲ್ಲಿ ನ್ಯಾಚುರಲ್ ಆಂಟಿಬ್ಯಾಕ್ಟೀರಿಯಲ್ ಅಂಶ ಹೆಚ್ಚಿರುತ್ತೆ ಇದು ನೋವನ್ನ ಹೀಲ್ ಮಾಡೋದಕ್ಕೆ ಸಹಾಯ ಮಾಡುತ್ತೆ .ಇದರ ಜೊತೆಗೆ ಜೇನುತುಪ್ಪವನ್ನ ನಾವು ನಾಲಿಗೆ ಮೇಲೆ ಅಪ್ಲೈ ಮಾಡುವುದರಿಂದ ಅದರಲ್ಲಿ ಇರುವಂತಹ ಸಿಹಿನ ಎಂಜಾಯ್ ಮಾಡಬಹುದು.
ಹಾಲು ಅಥವಾ ಮೊಸರು
ನಾಲಿಗೆ ಸುಟ್ಟಾಗ ತಣ್ಣಗಿರುವಂತ ಹಾಲು ಅಥವಾ ಮೊಸರನ್ನ ನಾವು ಸೇವನೆ ಮಾಡುವುದರಿಂದ ಬೇಗನೆ ನೋವು ನಿವಾರಣೆ ಆಗುತ್ತೆ. ಜೊತೆಗೆ ಉರಿ ಕೂಡ ಕಡಿಮೆಯಾಗುತ್ತೆ ನಮ್ಮ ನಾಲಿಗೆಯನ್ನು ಕೂಲಾಗಿ ಇಡುವುದಕ್ಕೆ ಇದು ಸಹಾಯ ಮಾಡುತ್ತೆ.
ಬೇಕಿಂಗ್ ಸೋಡಾ
ಪ್ರತಿಯೊಬ್ಬರ ಮನೆಯಲ್ಲೂ ಕೂಡ ಬೇಕಿಂಗ್ ಸೋಡಾ ಇರುತ್ತೆ. ಅರ್ಧ ಟೇಬಲ್ ಸ್ಪೂನ್ ಅಷ್ಟು ಬೇಕಿಂಗ್ ಸೋಡಕ್ಕೆ.ಅದಕ್ಕೆ ಬೇಕಾದಷ್ಟು ನೀರನ್ನ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಪೇಸ್ಟ್ ತಯಾರಿಸಿಕೊಳ್ಳಿ . ಆ ಪೇಸ್ಟ್ ನ ನಾಲಿಗೆ ಮೇಲೆ ಲೇಪನ ಮಾಡಿ ಕೆಲವು ನಿಮಿಷಗಳ ಕಾಲ ಹಾಗೆ ಬಿಡಿ.ನಂತರ ತಣ್ಣಗಿನ ನೀರಿನಿಂದ ಅದನ್ನು ವಾಶ್ ಮಾಡಿ.ಹೀಗೆ ಮಾಡುವುದರಿಂದ ನಾಲಿಗೆಯಲ್ಲಿರುವಂತ ನೋವು ಕಡಿಮೆ ಆಗುತ್ತದೆ.. ಬೇಕಿಂಗ್ ಸೋಡಾ ಪಿಎಚ್ ಲೆವೆಲ್ ಬ್ಯಾಲೆನ್ಸ್ ಮಾಡೋದಕ್ಕೆ ಸಹಾಯ ಮಾಡುತ್ತದೆ .ಹಾಗಾಗಿ ನಾಲಿಗೆಯ ಮೇಲೆ ಆಗಿರುವಂತ ಸುಟ್ಟ ನೋವು ಬೇಗನೆ ಹೀಲ್ ಆಗುತ್ತದೆ.
ಪುದಿನ ಎಲೆ
ನಾಲಿಗೆ ಸುಟ್ಟಾಗ ಒಂದೆರಡು ಪುದಿನ ಎಲೆಗಳನ್ನ ಚೆನ್ನಾಗಿ ಜಗಿದು ಅದರ ರಸವನ್ನು ನಾಲಿಗೆ ಮೇಲೆ ಹಾಗೆ ಇಟ್ಟುಕೊಂಡು ಕೆಲವು ನಿಮಿಷಗಳ ಕಾಲ ಬಿಟ್ಟು ವಾಶ್ ಮಾಡುವುದರಿಂದ ಬೇಗನೆ ಉರಿ ಕಡಿಮೆ ಆಗುತ್ತೆ .ನಮಗೆ ಏನೇ ಒಂದು ಡಿಸ್ಕಂಫರ್ಟ್ ಇದ್ದರೂ ಕೂಡ ಅದು ನಿವಾರಣೆ ಆಗುತ್ತೆ.
ಒಟ್ಟಿನಲ್ಲಿ ಏನೇ ಒಂದು ಆಹಾರವನ್ನು ತಿನ್ನಬೇಕಾದ್ರೂ ಕೂಡ ಹುಷಾರಾಗಿ ನಾವು ತಿನ್ನಬೇಕು ಅಕಸ್ಮಾತಾಗಿ ನಾಲಿಗೆ ಸುಟ್ಟಾಗ ತಕ್ಷಣಕ್ಕೆ ಒಂದು ಲೋಟ ತಣ್ಣಗಿರೋ ನೀರನ್ನ ಕುಡಿಯೋದ್ರಿಂದ ನೋವು ಅಥವಾ ಉರಿ ಬೇಗನೆ ಕಡಿಮೆಯಾಗುತ್ತೆ ಹಾಗೂ ಮೇಲ್ಕಂಡ ಹೋಂ ರೆಮೆಡಿ ಟ್ರೈ ಮಾಡಿ..