• Home
  • About Us
  • ಕರ್ನಾಟಕ
Monday, October 13, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ಓಮೈಕ್ರಾನ್‌ ಗೆ ನೂತನ ಆಸ್ಪತ್ರೆ ಸಿದ್ಧ : ಕ್ರಾಸ್‌ ಓವರ್‌ ಬೂಸ್ಟರ್‌ ಡೋಸ್‌ ನೀಡುವ ಬಗ್ಗೆ ಸರ್ಕಾರಕ್ಕೆ ಸಲಹೆ

ಕರ್ಣ by ಕರ್ಣ
December 15, 2021
in ಕರ್ನಾಟಕ
0
ಓಮೈಕ್ರಾನ್‌ ಗೆ ನೂತನ ಆಸ್ಪತ್ರೆ ಸಿದ್ಧ : ಕ್ರಾಸ್‌ ಓವರ್‌ ಬೂಸ್ಟರ್‌ ಡೋಸ್‌ ನೀಡುವ ಬಗ್ಗೆ ಸರ್ಕಾರಕ್ಕೆ ಸಲಹೆ
Share on WhatsAppShare on FacebookShare on Telegram

ಒಂದಲ್ಲಾ.. ಎರಡಲ್ಲಾ.. ಒಟ್ಟು ಮೂರು ಓಮೈಕ್ರಾನ್‌ ಪ್ರಕರಣಗಳು ಸದ್ಯ ಪತ್ತೆಯಾಗಿದೆ. ಇದೇ ಮೂರನೇ ಅಲೆಗೆ ದಾರಿ ಮಾಡುವ ಸಾಧ್ಯತೆ ಇದೆ. ಹೀಗಾಗಿ ಈಗಲೇ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳುವತ್ತ ಸರ್ಕಾರ ಚಿಂತಿಸಿದೆ. ಇದರ ನಡುವೆ ವೈದ್ಯರು ಮೂರನೇ ಡೋಸ್ ಅಂದರೆ ಬೂಸ್ಟರ್‌ ಡೋಸ್‌ ನೀಡುವ ಬಗ್ಗೆ ಭರದ ಚರ್ಚೆ ಆರಂಭಿಸಿದ್ದಾರೆ. ಜೊತೆಗೆ ಸರ್ಕಾರ ಕೂಡ ಬೆಡ್‌ಗಳನ್ನು ಸಿದ್ಧತೆ ಮಾಡಿಕೊಂಡಿದೆ.

ADVERTISEMENT

300ಕ್ಕೂ ಅಧಿಕ ಹಾಸಿಗೆ ರೆಡಿ

ರಾಜಧಾನಿಯಲ್ಲಿ 3ನೇ ಒಮಿಕ್ರಾನ್ ಕೇಸ್ ಪತ್ತೆ ಬೆನ್ನಲ್ಲೇ ಸರ್ಕಾರ ಎಚ್ಚೆತ್ತುಕೊಂಡಂತೆ ಕಾಣುತ್ತಿದೆ. ಎರಡನೇ ಅಲೆಯಲ್ಲಿ ಜನರು ಬೆಡ್ಗೆ ಪರದಾಟ, ಐಸಿಯುಗೆ ನಡೆಸಿದ ಅಲೆದಾಟ ಇನ್ನೂ ಜೀವಂತ  ದೃಶ್ಯಗಳಂತೆ ಕಣ್ಣಿಗೆ ಕಟ್ಟಿಕೊಂಡಿದೆ. ಇದರ ನಡುವೆ ಮೂರನೇ ಅಲೆ ಭೀತಿ ಹುಟ್ಟಿಸಿರುವ ಓಮೈಕ್ರಾನ್‌ ರೂಪಾಂತರಿ ವೈರಸ್‌ ಸದ್ದಿಲ್ಲದೆ ತನ್ನ ಸಂಖ್ಯೆ ಹೆಚ್ಚಿಸಿಕೊಳ್ಳುತ್ತಿರುವಂತೆ ಭಾಸವಾಗುತ್ತಿದೆ. ಹೀಗಾಗಿ ಎರಡನೇ ಅಲೆಯಲ್ಲಾದ ಎಡವಟ್ಟು ಈ ಬಾರಿ ಆಗದಂತೆ ಮೂರು ಪ್ರಕರಣಗಳು ಪತ್ತೆಯಾದ ಬೆನ್ನಲ್ಲೇ ಹಾಸಿಗೆಗಳ ವ್ಯವಸ್ಥೆಯನ್ನು ಮಾಡಿಕೊಂಡಿದೆ.

ಹೌದು, ಮೂರನೇ ಅಲೆಗೂ ಮುನ್ನ ಸರ್ಕಾರ ಮೆಗಾ ಪ್ಲಾನ್ ಮಾಡಿಕೊಂಡಿದೆ. ಮೂರು ಓಮೈಕ್ರಾನ್ ಕೇಸ್ ಪತ್ತೆಯಾದ ಬೆನ್ನಲ್ಲೇ 300ಕ್ಕೂ ಅಧಿಕ ಹಾಸಿಗೆ ರೆಡಿ ಆಗಿದೆ. ಓಮೈಕ್ರಾನ್ ಸೋಂಕಿತರ ಚಿಕಿತ್ಸೆಗೆ ರಾಜಧಾನಿಯ ಎರಡು ಆಸ್ಪತ್ರೆಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ನಗರದ ಬೌರಿಂಗ್‌ ಆಸ್ಪತ್ರೆಯಲ್ಲಿ 120 ಬೆಡ್‌ಗಳ ವ್ಯವಸ್ಥೆಯನ್ನು ಮಾಡಿ ಓಮೈಕ್ರಾನ್‌ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದರ ಬೆನ್ನಲ್ಲೇ ಬೌರಿಂಗ್ ಆಸ್ಪತ್ರೆ ಬಳಿಕ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಬೃಹತ್ ಓಮೈಕ್ರಾನ್ ಮೊಬೈಲ್ ಆಸ್ಪತ್ರೆ ನಿರ್ಮಿಸಲಾಗಿದೆ. 200 ಬೆಡ್ಗಳ ಸುಸಜ್ಜಿತ ವ್ಯವಸ್ಥೆ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಮಾಡಿಕೊಳ್ಳಲಾಗಿದೆ. ಇಲ್ಲಿ, 37 ಐಸಿಯು ಬೆಡ್‌ ಹಾಗೂ  163 ಆಕ್ಸಿಜನ್ ಸಹಿತ ಹಾಸಿಗೆಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದ್ದು, ಬೌರಿಂಗ್ ಆಸ್ಪತ್ರೆ ಭರ್ತಿ ಬಳಿಕ ಸೋಂಕಿತರಿಗೆ ಇಲ್ಲಿ ಚಿಕಿತ್ಸೆ ನೀಡಲಾಗುತ್ತೆ. ಈ ಮೂಲಕ 3  ಓಮೈಕ್ರಾನ್ ಕೇಸ್ ಪತ್ತೆ ಬೆನ್ನಲ್ಲೇ 320 ಬೆಡ್ ಓಮೈಕ್ರಾನ್ ಗಾಗಿ ಮೀಸಲಿಡಲಾಗಿದೆ.

ಓಮೈಕ್ರಾನ್‌ ನಡುವೆ ಮೂರನೇ ಡೋಸ್ ಲಸಿಕೆಗೆ ವೈದ್ಯರ ಒಲವು

ಇನ್ನು ಈ ಓಮೈಕ್ರಾನ್ ನಿಂದ ರಕ್ಷಣೆ ಪಡೆಯಲು ಬೂಸ್ಟರ್ ಡೋಸ್ ಬೇಕೋ..? ಬೇಡವೋ..? ಎಂದು ತಜ್ಞ ವೈದ್ಯರ ವಲಯದಲ್ಲಿ ಶುರುವಾದ ಭಾರಿ ಚರ್ಚೆ ಶುರುವಾಗಿದೆ. ಈಗಾಗಲೇ ಐಸಿಎಂಆರ್ ಗೆ ಬೂಸ್ಟರ್ ಡೋಸ್ ಬಗ್ಗೆ ಖ್ಯಾತ ವೈದ್ಯರು ಸಲಹೆ ನೀಡಿದ್ದಾರೆ. ಹೀಗಾಗಿ ರಾಜ್ಯದಲ್ಲೂ ಬೂಸ್ಟರ್ ಡೋಸ್ ನೀಡುವ ಬಗ್ಗೆ ಬಿಸಿ ಚರ್ಚೆ ಆರಂಭವಾಗಿದೆ. ರಾಜ್ಯದಲ್ಲೂ ಕೂಡ ತಜ್ಞ ವೈದ್ಯರು ಬೂಸ್ಟರ್ ಡೋಸ್ ನೀಡಿದರೆ ಉತ್ತಮ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಓಮೈಕ್ರಾನ್ ತೀವ್ರತೆ ಕಡಿಮೆ ಮಾಡುವಲ್ಲಿ ಮೂರನೇ ಡೋಸ್ ಉಪಯುಕ್ತವಾಗಲಿದೆ ಎಂದು ಹಿರಿಯ ವೈದ್ಯರು ತಮ್ಮ ಸಲಹೆಯನ್ನು ಸರ್ಕಾರಕ್ಕೆ ನೀಡಿದ್ದಾರೆ.

ಕ್ರಾಸ್ ಓವರ್ ಬೂಸ್ಟರ್ ಡೋಸ್ ನೀಡಿದರೆ ಉತ್ತಮ

ಬೂಸ್ಟರ್‌ ಡೋಸ್‌ ಲಸಿಕೆ ನೀಡಿದರೆ ಕ್ರಾಸ್‌ ಓವರ್‌ ಆಗಿ ನೀಡಬೇಕು ಎಂಬ ಅಭಿಪ್ರಾಯವನ್ನೂ ತಜ್ಞರು ನೀಡಿದ್ದಾರೆ. ಕ್ರಾಸ್‌ ಓವರ್‌ ಡೋಸ್‌ ನೀಡುವುದರಿಂದ ಜನರಿಗೆ ಓಮೈಕ್ರಾನ್‌ ವಿರುದ್ಧ ಹೋರಾಟದಲ್ಲಿ ಹೆಚ್ಚು ಪ್ರತಿಕಾಯ ಶಕ್ತಿಯನ್ನು ಪಡೆದುಕೊಳ್ಳಬಹುದು ಎಂಬ ನಿಲುವು ವೈದ್ಯರದ್ದಾಗಿದೆ.

ಅಷ್ಟಕ್ಕೂ ಏನಿದು ಕ್ರಾಸ್ ಓವರ್ ಬೂಸ್ಟರ್ ಡೋಸ್?

ಮೊದಲೆರೆಡು ಬಾರಿ ಕೋವಿಶೀಲ್ಡ್ ಲಸಿಕೆ ಪಡೆದವರಿಗೆ ಬೂಸ್ಟರ್ ಡೋಸ್ ಆಗಿ ಕೋವ್ಯಾಕ್ಸಿನ್ ನೀಡುವುದು. ಹೀಗೆ ಮೊದಲೆರೆಡು ಬಾರಿ ಪಡೆದ ಲಸಿಕೆಗೆ ಬದಲಾಗಿ ಬೇರೆ ಕಂಪನಿಯ ಲಸಿಕೆ ನೀಡುವುದೇ ಕ್ರಾಸ್‌ ಓವರ್‌ ಬೂಸ್ಟರ್‌ ಡೋಸ್‌. ವಿದೇಶಗಳಲ್ಲಿ ಈಗಾಗಲೇ ಕ್ರಾಸ್ ಓವರ್ ಬೂಸ್ಟರ್ ಡೋಸ್ ಸಿಕ್ಕಾಪಟ್ಟೆ ಸಕ್ಸಸ್ ಆಗಿದೆ. ಇದೇ ರೀತಿಯ ಬೂಸ್ಟರ್ ಡೋಸ್ ನೀಡಿದರೆ ಉತ್ತಮ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಒಟ್ಟಾರೆ ಓಮೈಕ್ರಾನ್‌ ವಿರುದ್ಧ ಹೋರಾಡಲು ಸರ್ಕಾರ ಹಾಸಿಗೆಗಳ ವ್ಯವಸ್ಥೆಯನ್ನು ಮಾಡಿಕೊಂಡರೆ ಇತ್ತ ತಜ್ಞರು ಕೂಡ ಮೂರನೆ ಡೋಸ್‌ ನೀಡುವ ಬಗ್ಗೆಯೂ ಆಲೋಚನೆ ಆರಂಭಿಸಿದ್ದಾರೆ. ಬೂಸ್ಟರ್‌ ಡೋಸ್‌  ನೀಡುವ ಕುರಿತು ಈಗಾಗಲೇ ಸರ್ಕಾರಕ್ಕೂ ಹಿರಿಯ ವೈದ್ಯರು ತಮ್ಮ ನಿಲುವನ್ನು ಸ್ಪಷ್ಟ ಪಡಿಸಿದ್ದಾರೆ. ಆದರೆ ಸರ್ಕಾರದ ನಿರ್ಧಾರವೇನು ಎಂಬುವುದನ್ನು ಕಾದು ನೋಡಬೇಕಿದೆ.

Tags: Covid 19omicronಕರೋನಾಕೋವಿಡ್-19
Previous Post

ಉಭಯವಾಸಿಗಳ ಜೀವ ಸಂಕುಲ ಸಂರಕ್ಷಣೆಯ ಆಶಯದ ಕಪ್ಪೆ ಹಬ್ಬ!

Next Post

ಒನ್‌-ಡೇ ನಾಯಕತ್ವದಿಂದಲೂ ಕೊಹ್ಲಿ ಔಟ್ ; ಬಿಸಿಸಿಐ ನಿರ್ಧಾರದ ಹಿಂದಿನ ಮರ್ಮವೇನು?

Related Posts

Top Story

HD Devegowda: ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಯಲ್ಲಿ ಬುಕ್ ಓದುತ್ತ ಕುಳಿತ ದೇವೇಗೌಡ್ರು..!!

by ಪ್ರತಿಧ್ವನಿ
October 13, 2025
0

ಜ್ವರ ಹಾಗೂ ಯೂರಿನ್ ಸೋಂಕಿನಿಂದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಪ್ರಧಾನಿ ಹೆಚ್​ ಡಿ ದೇವೇಗೌಡ್ರು ಚೇತರಿಸಿಕೊಂಡಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಮುಂದಿನ ಕೆಲವು ದಿನಗಳ...

Read moreDetails

Priyank Kharge: ಉತ್ತಮ ಗುಣಮಟ್ಟದ ನೀರು ಬಳಕೆ ಹಾಗೂ ಸಂಶೋಧನಗೆ ಉತ್ಕೃಷ್ಟತಾ ಕೇಂದ್ರ ಸ್ಥಾಪನೆ..!!

October 13, 2025

Sunil Kumar: ಇಂದಿರಾ ಗಾಂಧಿಗೂ ಹೆದರಿಲ್ಲ, ನೆಹರೂ ಮುಂದೆನೂ ಮಂಡಿಯೂರಿಲ್ಲ, ಪ್ರಿಯಾಂಕ್ ಖರ್ಗೆ ಯಾರು?

October 13, 2025

Siddaramaiah: ತಮಿಳುನಾಡಿನಲ್ಲಿ ಕೈಗೊಂಡಂತೆ ಆರ್‌ಎಸ್‌ಎಸ್‌ ವಿರುದ್ಧ ರಾಜ್ಯದಲ್ಲಿ ಕ್ರಮ..!!

October 13, 2025

ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದ ಮಾಜಿ ಐಎಎಸ್‌ ಅಧಿಕಾರಿ ಕಣ್ಣನ್‌ ಗೋಪಿನಾಥನ್..

October 13, 2025
Next Post
ಒನ್‌-ಡೇ ನಾಯಕತ್ವದಿಂದಲೂ ಕೊಹ್ಲಿ ಔಟ್ ; ಬಿಸಿಸಿಐ ನಿರ್ಧಾರದ ಹಿಂದಿನ ಮರ್ಮವೇನು?

ಒನ್‌-ಡೇ ನಾಯಕತ್ವದಿಂದಲೂ ಕೊಹ್ಲಿ ಔಟ್ ; ಬಿಸಿಸಿಐ ನಿರ್ಧಾರದ ಹಿಂದಿನ ಮರ್ಮವೇನು?

Please login to join discussion

Recent News

Top Story

HD Devegowda: ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಯಲ್ಲಿ ಬುಕ್ ಓದುತ್ತ ಕುಳಿತ ದೇವೇಗೌಡ್ರು..!!

by ಪ್ರತಿಧ್ವನಿ
October 13, 2025
Top Story

Priyank Kharge: ಉತ್ತಮ ಗುಣಮಟ್ಟದ ನೀರು ಬಳಕೆ ಹಾಗೂ ಸಂಶೋಧನಗೆ ಉತ್ಕೃಷ್ಟತಾ ಕೇಂದ್ರ ಸ್ಥಾಪನೆ..!!

by ಪ್ರತಿಧ್ವನಿ
October 13, 2025
Top Story

Sunil Kumar: ಇಂದಿರಾ ಗಾಂಧಿಗೂ ಹೆದರಿಲ್ಲ, ನೆಹರೂ ಮುಂದೆನೂ ಮಂಡಿಯೂರಿಲ್ಲ, ಪ್ರಿಯಾಂಕ್ ಖರ್ಗೆ ಯಾರು?

by ಪ್ರತಿಧ್ವನಿ
October 13, 2025
Top Story

Siddaramaiah: ತಮಿಳುನಾಡಿನಲ್ಲಿ ಕೈಗೊಂಡಂತೆ ಆರ್‌ಎಸ್‌ಎಸ್‌ ವಿರುದ್ಧ ರಾಜ್ಯದಲ್ಲಿ ಕ್ರಮ..!!

by ಪ್ರತಿಧ್ವನಿ
October 13, 2025
Top Story

ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದ ಮಾಜಿ ಐಎಎಸ್‌ ಅಧಿಕಾರಿ ಕಣ್ಣನ್‌ ಗೋಪಿನಾಥನ್..

by ಪ್ರತಿಧ್ವನಿ
October 13, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

HD Devegowda: ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಯಲ್ಲಿ ಬುಕ್ ಓದುತ್ತ ಕುಳಿತ ದೇವೇಗೌಡ್ರು..!!

October 13, 2025

Priyank Kharge: ಉತ್ತಮ ಗುಣಮಟ್ಟದ ನೀರು ಬಳಕೆ ಹಾಗೂ ಸಂಶೋಧನಗೆ ಉತ್ಕೃಷ್ಟತಾ ಕೇಂದ್ರ ಸ್ಥಾಪನೆ..!!

October 13, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada