
ಸಹಕಾರಿ ಸಚಿವರ ಮೇಲೆ ಹನಿಟ್ರಾಪ್ ಆಗಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೇರವಾಗಿ ಸದನದಲ್ಲಿ ಹೇಇದ ಬಳಿಕ ಸ್ವತಃ ಸಚಿವ ರಾಜಣ್ಣ ಕೂಡ ಹನಿಟ್ರ್ಯಾಪ್ ಯತ್ನ ನಡೆದಿತ್ತು ಎನ್ನುವುದನ್ನು ಒಪ್ಪಿಕೊಂಡಿದ್ದಾರೆ. ಹನಿಟ್ರ್ಯಾಪ್ ನಡೆದಿರೋದು ಸತ್ಯ ಎಂದು ಸಚಿವ ಸತೀಶ್ ಜಾರಕಿಹೊಳಿ ಅವರು ಸಹ ಒಪ್ಪಿಕೊಂಡಿದ್ದಾರೆ. ಇದರ ಬಗ್ಗೆ ಸಮಗ್ರ ತನಿಖೆ ಆಗಬೇಕು. ಸ್ಪೆಷಲ್ ಸ್ಕ್ವಾಡ್ ನೇಮಕ ಮಾಡಬೇಕು. ಯಾರು ಹನಿಟ್ರ್ಯಾಪ್‌ಗೆ ಎಷ್ಟು ಇನ್ವೆಸ್ಟ್ ಮಾಡಿದ್ದಾರೆ..? ಯಾವ ಉದ್ದೇಶಕ್ಕೆ ಮಾಡಿದ್ದಾರೆ..? ಹನಿಟ್ರ್ಯಾಪ್ ಮಾಡಿ ಬ್ಲಾಕ್ ಮೇಲ್ ಮಾಡಿದ್ದಾರ..? ಇದೆಲ್ಲ ಸಮಗ್ರ ಚರ್ಚೆಯಾಗಬೇಕು ಎಂದು ಪಕ್ಷಾತೀತವಾಗಿ ಒತ್ತಾಯ ಕೇಳಿ ಬಂದಿದೆ.
ಇನ್ನು ಹನಿಟ್ರ್ಯಾಪ್ ಮಾಡಿಸಿದವರು ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಅನ್ನೋದು ಸಾಕಷ್ಟು ಜನರ ಗುಮಾನಿ. ಇದೇ ಕಾರಣಕ್ಕೆ ಮುಂದೆ ಸಿಎಂ ಆಗಬೇಕೆಂದು ಆಸೆ ಇಟ್ಟುಕೊಂಡವರು ಈ ರೀತಿ ಮಾಡ್ತಿದ್ದಾರೆ ಎಂದಿದ್ದಾರೆ ಯತ್ನಾಳ್. ಬಿಜೆಪಿ ಶಾಸಕ ಮುನಿರತ್ನ ಸದನದಲ್ಲಿ ಕಣ್ಣೀರು ಹಾಕಿದ್ದು, ಯಾರ ರಾಜಕೀಯ ಜೀವನವನ್ನು ಈ ರೀತಿಯ ಕೃತ್ಯದಿಂದ ಮುಗಿಸಬಾರದು. ನನ್ನ ಮೇಲೆ ರೇಪ್ ಕೇಸ್ ಹಾಕಿ ನನ್ನ ಜೀವನವನ್ನೇ ಹಾಳು ಮಾಡಿದ್ದಾರೆ. ರಮೇಶ್ ಜಾರಕಿಹೊಳಿಯ ಭವಿಷ್ಯ ಹಾಳು ಮಾಡಿದ್ರು. ಆ ಬಳಿಕ ರೇವಣ್ಣ, ಸೂರಜ್ ರೇವಣ್ಣ, ಈಗ ಸಚಿವ ಕೆ ಎನ್ ರಾಜಣ್ಣ ಎಂದು ನೇರವಾಗಿ ಡಿ.ಕೆ ಶಿವಕುಮಾರ್ ವಿರುದ್ಧ ಮುನಿರತ್ನ ಮಾತನಾಡಿದ್ದಾರೆ. ಜೊತೆಗೆ ಅಜ್ಜಯ ಮತ್ತು ಶನಿ ಮಹಾತ್ಮನ ಫೋಟೋ ತೋರಿಸಿ ಪ್ರಮಾಣ ಮಾಡಲಿ ಎಂದು ಸವಾಲು ಕೂಡ ಹಾಕಿದ್ದಾರೆ.

ರಾಜ್ಯ ರಾಜಕಾರಣದಲ್ಲಿ ತೀವ್ರ ಸದ್ದು ಮಾಡುತ್ತಿರುವ ಹನಿಟ್ರ್ಯಾಪ್ ಪ್ರಕರಣದ ಬಗ್ಗೆ ಸಿಎಂ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದ ಕೆಲವು ಸಚಿವರು, ಹನಿಟ್ರ್ಯಾಪ್ ಮಾಸ್ಟರ್ ಮೈಂಡ್ ಬಗ್ಗೆ ಸಿಎಂ ಸಿದ್ದರಾಮಯ್ಯ ಜೊತೆಗೆ ಗಂಭೀರ ಚರ್ಚೆ ನಡೆಸಿದ್ದಾರೆ. ಸಿಎಂ ಬಳಿ ದಾಖಲೆಗಳನ್ನ ತೋರಿಸಿ ರಹಸ್ಯ ಮಾತುಕತೆ ನಡೆಸಿದ್ದಾರೆ. ಹನಿಟ್ರ್ಯಾಪ್ ಕುರಿತು ಸಿಎಂ ಸಿದ್ದರಾಮಯ್ಯಗೆ ಮಾಹಿತಿ ನೀಡಿದ ಬಳಿಕ ಗೃಹ ಸಚಿವರಿಂದಲೂ ಸಿಎಂ ಮಾಹಿತಿ ಪಡೆದಿದ್ದಾರೆ. ಪೊಲೀಸರಿಗೆ ದೂರು ನೀಡುವುದು ಜೊತೆಗೆ ಕಾನೂನು ಹೋರಾಟ ಕುರಿತು ಸಿಎಂ ಜೊತೆ ಮಾತುಕತೆ ನಡೆದಿದೆ.
ಹನಿ ಟ್ರ್ಯಾಪ್ ಒಳಾಗಿರುವ ಬಗ್ಗೆ ಖಚಿತ ಪಡಿಸಿದ ಸತೀಶ್ ಜಾರಕಿಹೊಳಿ, ಸಚಿವರ ಮೇಲೆ ಎರಡು ಸಲ ಹನಿ ಟ್ರ್ಯಾಪ್ ಆಗಿದೆ. ಅದನ್ನ ಕೆಲವರು ಬಂಡವಾಳ ಮಾಡಿಕೊಂಡಿದ್ದಾರೆ. ಸಂಬಂಧ ಪಟ್ಟ ಸಚಿವರಿಗೆ ದೂರು ಕೊಡಲು ಹೇಳಿದ್ದೀನಿ. ಇದಕ್ಕೆ ಕಡಿವಾಣ ಹಾಕಬೇಕು. ಇದರಲ್ಲಿ ನಮ್ಮವರು ಅಷ್ಟೇ ಅಲ್ಲ, ಬೇರೆ ಪಕ್ಷದ ನಾಯಕರು ಕೂಡ ಹನಿ ಟ್ರ್ಯಾಪ್ ನಲ್ಲಿ ಸಿಲುಕಿದ್ದಾರೆ. ಇದು ಇಲ್ಲಿಗೆ ನಿಲ್ಲಬೇಕು. ಈ ವಿಚಾರವಾಗಿ ಸಿಎಂ ಮತ್ತು ಗೃಹ ಸಚಿವರ ಜೊತೆ ಮಾತನಾಡಿದ್ದೇನೆ ಎಂದಿದ್ದಾರೆ. ಷಡ್ಯಂತ್ರದ ಬಗ್ಗೆ ಸಿಎಂಗೆ ವಿವರಣೆ ನೀಡುವಾಗ ಸಚಿವ ರಾಜಣ್ಣ ಕೂಡ ಭಾವುಕರಾಗಿ ಕಣ್ಣೀರು ಇಟ್ಟಿದ್ದಾರೆ. ನನ್ನ ರಾಜಕೀಯ ಜೀವನವನ್ನೇ ಮುಗಿಸಲು ಈ ರೀತಿ ಮಾಡಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ. ನೀನು ದೂರು ಕೊಟ್ಟರೆ, ಬಯಸಿದರೆ ಉನ್ನತಮಟ್ಟದ ತನಿಖೆ ಮಾಡಿಸುತ್ತೇನೆಂದು ಸಿಎಂ ಭರವಸೆ ನೀಡಿ ಸಂತೈಸಿದ್ದಾರೆ.

ಕನ್ನಡ ನಾಡು ಸುಂಸ್ಕೃತ ರಾಜ್ಯ. ಹನಿಟ್ರ್ಯಾಪ್ ಪ್ರಕರಣವನ್ನು ಯಾರೂ ಸಹಿಸಲಾಗಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಹೇಳಿದ್ದಾರೆ. ಜನಪ್ರತಿನಿಧಿಗಳನ್ನ ಬ್ಲಾಕ್ ಮೇಲ್ ಮಾಡ್ತಾರೆ. 224 ಶಾಸಕರು ಸದನದಲ್ಲಿದ್ದೇವೆ. ಈ ರೀತಿ ಬ್ಲಾಕ್ ಮೇಲ್ ಮಾಡಿದ್ರೆ ಹೇಗೆ..? ಎಂದು ಹನಿಟ್ರ್ಯಾಪ್ ವಿಷಯವನ್ನು ಸದನದಲ್ಲಿ ಪ್ರಸ್ತಾಪಿಸಿದ್ದಾರೆ. ಈ ವೇಳೆ ಮಧ್ಯಪ್ರವೇಶ ಮಾಡಿದ ಸಚಿವ ಕೆ.ಎನ್ ರಾಜಣ್ಣ, ಹನಿಟ್ರ್ಯಾಪ್ ವಿಚಾರ ಪ್ರಸ್ತಾಪ ಮಾಡಿದ್ದಾರೆ. ಅದಕ್ಕೆ ನಾನು ಕ್ಲಾರಿಫೈ ಮಾಡಬೇಕಿದೆ. ಸಿಡಿ ಮಾಡೋದು, ಪೆನ್ ಡ್ರೈವ್ ಮಾಡೋದು ಸರಿಯೇ..? ಇದರಲ್ಲಿ ಒಬ್ಬರು ಇಬ್ಬರು ಅಲ್ಲ 48 ಜನರದ್ದು ಮಾಡಿದ್ದಾರೆ. ಬಹಳಷ್ಟು ಜನ ಸ್ಟೇ ತೆಗೆದುಕೊಂಡಿದ್ದಾರೆ. ಇದೊಂದು ರಾಷ್ಟ್ರ ಮಟ್ಟದ ಪ್ರಕರಣ, ಇದರ ತನಿಖೆ ಆಗಬೇಕು. ನಾನು ಗೃಹ ಮಂತ್ರಿಗಳಿಗೆ ದೂರು ಕೊಡ್ತೇನೆ. ಅವರು ಇದರ ತನಿಖೆ ಮಾಡಲಿ. ಯಾರು ಪ್ರೊಡ್ಯೂಸರ್ ಇದ್ದಾರೆ, ಡೈರೆಕ್ಟರ್ ಇದ್ದಾರೆ ಹೊರಬರಲಿ. ರೇವಣ್ಣ ಕುಟುಂಬದ ಮೇಲೂ ಆಗಿದೆ. ಈಗ ನನ್ನ ಮೇಲೂ ಆಗಿದೆ ಎಂದು ಸಚಿವ ಕೆ.ಎನ್.ರಾಜಣ್ಣ ತನಿಖೆಗೆ ಒತ್ತಾಯ ಮಾಡಿದ್ದಾರೆ.