
ಬೆಳಗಾವಿಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಸಚಿವ ಕೆ ಎನ್ ರಾಜಣ್ಣಗೆ ಹನಿಟ್ರ್ಯಾಪ್ ಯತ್ನ ಪ್ರಕರಣದ ಬಗ್ಗೆ ಮಾತನಾಡಿರುವ ಸಚಿವ ಸತೀಶ್ ಜಾರಕಿಹೊಳಿ, ರಾಜಣ್ಣ ದೂರು ಕೊಟ್ಟ ಮೇಲೆ ಮುಂದಿನ ತನಿಖೆ ಆಗಲಿದೆ. ಸಚಿವರು ದೂರು ಕೊಡ್ತಾರೆ. ಇನ್ನೂ ಟೈಂ ಇದೆ ಎಂದಿದ್ದಾರೆ.
ಪರಿಶಿಷ್ಟರು ಅಂತ ಅಲ್ಲ, ಘರ್ಜಿಸುವ ಹುಲಿಗಳನ್ನು ಟಾರ್ಗೆಟ್ ಮಾಡ್ತಾರೆ. ಘರ್ಜಿಸುವರಿಗೆ ಸಿಡಿ ತೋರಿಸುವ ಕೆಲಸ ಆಗುತ್ತಿದೆ ಎಂದು ಸತೀಶ್ ಜಾರಕಿಹೊಳಿ ದೂರಿದ್ದಾರೆ. ಹೈಕಮಾಂಡ್‌ಗೆ ದೂರು ಕೊಡುವಂತಹದು ಏನು ಇದೆ..? ಸಿಡಿ ಫ್ಯಾಕ್ಟರಿ ಎಲ್ಲಿದೆ..? ಎಂದು ಪೊಲೀಸರೇ ಪತ್ತೆ ಹಚ್ಚಬೇಕು. ಇನ್ನೂ ರಾಜಣ್ಣ ಕಂಪ್ಲೆಟ್ ಕೊಡಬೇಕು. ತನಿಖೆಯಾದ ಮೇಲೆ ನಿರ್ಧಿಷ್ಟವಾಗಿ ಹೇಳಬಹುದು ಎಂದಿದ್ದಾರೆ.
ಇನ್ನು ಬಿಜೆಪಿ ಶಾಸಕ ಮುನಿರತ್ನ ಡಿ.ಕೆ ಶಿವಕುಮಾರ್ ವಿರುದ್ಧ ನೇರವಾಗಿ ಆರೋಪ ಮಾಡಿದ್ದಾರೆ ಅನ್ನೋ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಮುನಿರತ್ನ ಅವರು ಆರೋಪ ಮಾಡಿದ್ದಾರೆ ಎಂದು ನಾವು ಆರೋಪ ಮಾಡಲು ಆಗಲ್ಲ. ಪೊಲೀಸ್ ತನಿಖೆ ಆಗಲಿ. 40 ಜನ ಇರಬಹುದು ಎಂದು ಅಷ್ಟೇ ರಾಜಣ್ಣ ಹೇಳಿದ್ದಾರೆ. ಅದರ ಸಂಖ್ಯೆ 400 ಕೂಡ ಇರಬಹುದು ಎಂದಿದ್ದಾರೆ.

ಹಾಯ್ ಅಂದ್ರೆ ನೀವು ಯಾಕೆ ಹಲೋ ಅಂತೀರಾ..? ಎಂಬ ಡಿ.ಕೆ ಶಿವಕುಮಾರ್ ಹೇಳಿಕೆ ತಿರುಗೇಟು ನೀಡಿದ್ದು, ವಿಲ್ಹ್ ಪವರ್, ಅನುಭವ ಬದ್ದತೆಯ ಮೇಲೆ ಇದು ನಿರ್ಧಾರ ಆಗುತ್ತದೆ. ಒಂದು ಸಲ ಹಾಯ್ ಅಂದ್ರೆ ಅಟ್ರ್ಯಾಕ್ಟ್ ಆಗಿತ್ತು. ಎರಡನೇ ಸಲಕ್ಕೆ ಆಗುತ್ತಾ..?
ಗಟ್ಟಿ ಇದ್ರೆ ಆಗಲ್ಲ, ಸ್ವಲ್ಪ ವೀಕ್ನೆಸ್ ಇದ್ರೆ ಒಂದೇ ಸಲಕ್ಕೆ ಮೊಬೈಲ್ ರಿಂಗ್ ಆಗೋಕೆ ಶುರು ಆಗುತ್ತೆ. ಮೊದಲೇ ಹೆದರಿಕೆ ಇದ್ರೆ 10 ಸಲ ಹಾಯ್ ಅಂದ್ರು ಹಲೋ ಅನ್ನಲ್ಲ. ಹಾಯ್ ಅಂದ್ರೆ ಹಾಯ್ ಅಂತಾ ಯಾವ ದೃಷ್ಟಿಯಲ್ಲಿ ಹೇಳಿದ್ದಾರೋ ಗೊತ್ತಾಗ್ತಿಲ್ಲ ಎಂದಿದ್ದಾರೆ.

ಸಚಿವ ರಾಜಣ್ಣ ವಕೀಲರು ಹಾಗೂ ತಜ್ಞರ ಜೊತೆಗೆ ಚರ್ಚೆ ಮಾಡಿ ದೂರು ಕೊಡಬೇಕು. ರಾಜಣ್ಣಗೆ ದೂರು ಕೊಡಲು ಸಲಹೆ ಕೊಟ್ಟಿದು ಮಾತ್ರ ನಾನೇ. ಸೂತ್ರದಾರಿ ಯಾರು ಎಂಬುದು ಹೊರಬರಬೇಕು. ಯತ್ನಾಳ್ ಜೊತೆಗೆ ಕಾಂಗ್ರೆಸ್ ನಾಯಕರಿಂದ ಚೀಟಿ ವಿಚಾರದ ಬಗ್ಗೆ ಮಾತನಾಡಿ, ಯತ್ನಾಳ್ ಚೀಟಿ ಕೊಟ್ರೆ ಮಾತನಾಡ್ತಾರಾ..? ಎಂದು ಪ್ರಶ್ನಿಸಿದ್ದಾರೆ.
ಸಿಬಿಐ ತನಿಖೆಗೆ ಕೊಡ್ತೀರಾ ಎನ್ನುವ ಪ್ರಶ್ನೆಗೆ ಉತ್ತರಿಸಿ, ಸಿಬಿಐ ಯಾಕೆ..? ನಮ್ಮವರೇ ತನಿಖೆ ಮಾಡ್ತಾರೆ. ಮಹಾನ್ ನಾಯಕರ ಹೆಸರು ಪದೇ ಪದೇ ಪ್ರಸ್ತಾಪ ಆಗ್ತಿದೆ ಅನ್ನೋ ವಿಚಾರದ ಬಗ್ಗೆ ಮಾತನಾಡಿ, ಯಾವ ತನಿಖೆ ಆಗಬೇಕು ಎಂದು ಸಿಎಂ ಸಿದ್ದರಾಮಯ್ಯ ತೀರ್ಮಾನ ಮಾಡ್ತಾರೆ. ಕೆಲವು ಕಡೆ ರಾಜಕೀಯ ಇದೆ, ಬ್ಯುಸಿನೆಸ್‌ಗಾಗಿಯೂ ಬ್ಲ್ಯಾಕ್ ಮೇಲ್ ಮಾಡುವ ಉದ್ದೇಶ ಇದೆ. ತನಿಖೆ ಆಗೋವರೆಗೆ ಕಾಯಬೇಕು ಅಷ್ಟೇ ಎಂದಿದ್ದಾರೆ.
